ಜಾನುವಾರು ಅಕ್ರಮ ಸಾಗಾಟ ಪತ್ತೆ: ಇಬ್ಬರ ಬಂಧನ

arrested
Published on

ಬೆಳ್ತಂಗಡಿ: ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವೇಣೂರು ಠಾಣಾ ಪೊಲೀಸರು ಪತ್ತೆಹಚ್ಚಿ ಆರೋಪಿಗಳಿಬ್ಬರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ತಾಲೂಕಿನ ನಾಲ್ಕೂರು ಗ್ರಾಮದ ಕುಕ್ಕನಡ್ಕ ಎಂಬಲ್ಲಿ ಬಳಂಜ ಪೆರ್ಮುಡ -ವೇಣೂರು ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯ ನಿರತರಾಗಿದ್ದಾಗ ಬೆಳ್ತಂಗಡಿ ಕೋರ್ಟ್ ರಸ್ತೆ ಸಂಜಯನಗರ ನಿವಾಸಿ ಇಮ್ತಿಯಾಜ್ ( 29) ಮತ್ತು ಪಡಂಗಡಿ ಗ್ರಾಮದ ಪಾದೆ ಮನೆ ರಮ್ಲ ಯಾನೆ ಆಸೀಪ್ (26) ಕ್ಯಾರಿ ಟರ್ಬೋ ವಾಹನದಲಿ ಅಕ್ರಮವಾಗಿ 3 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net