ದಾಖಲೆಗಳಿಲ್ಲದ 6.80ಲಕ್ಷ ರೂ. ವಶ

Published on

ಕಾಸರಗೋಡು: ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಖಾಸಗಿ ಬಸ್‌ನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 6,80,600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಂಬ್ಡಾಜೆ ಪಂಚಾಯಿತಿ ಪಿಲಾಂಕಟ್ಟೆ ನಿವಾಸಿ ಮಣಿಪ್ರಶಾಂತ್ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ದಳ ಇನ್ಸ್‌ಪೆಕ್ಟರ್ ಕೆ.ವಿ.ಸುನೇಶ್ ನೇತೃತ್ವ ತಂಡ ಕ್ರಿಸ್‌ಮಸ್-ಹೊಸ ವರ್ಷಾಚರಣೆಯನ್ವಯ ಸ್ಪೆಷಲ್ ಡ್ರೈವ್ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net