

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜೆಸಿಐ ಸಮಾಜದ ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಹೋಗುವ ಶ್ರೇಷ್ಠ ಸಂಸ್ಥೆ. ಇದು ಯುವ ಜನಾಂಗದ ಶಕ್ತಿಯಾಗಿದ್ದು ಇದರಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರೂ ಉತ್ತಮ ನಾಯಕರಾಗಿ ಸಾರ್ಥಕ ಬದುಕನ್ನು ಕಂಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿಯಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೇಸಿ ಸಪ್ತಾಹ-2024 ‘ಸುಧಾಮ ಸ್ನೇಹ-ಸಾಧನೆ-ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ ಪೂಜಾರಿ ಶುಭ ಹಾರೈಸಿದರು.
ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಲೇಡಿ ಜೇಸಿ ಸಂಯೋಜಕಿ ಶ್ರುತಿ ರಂಜಿತ್, ಸಪ್ತಾಹ ಸಂಯೋಜಕಿ ಹೇಮಾವತಿ ಕೆ., ಸಹ ಸಂಯೋಜಕ ರಕ್ಷಿತ್ ಅಂಡಿಂಜೆ, ಘಟಕದ ಉಪಾಧ್ಯಕ್ಷರಾದ ಆಶಾಲತ ಪ್ರಶಾಂತ್, ಸುಧೀರ್ ಕೆ. ಎನ್., ಶೀತಲ್ ಜೈನ್, ಕೋಶಾಧಿಕಾರಿ ಮಮಿತ ಸುಧೀರ್ ಉಪಸ್ಥಿತರಿದ್ದರು.
ಜೆಸಿಐ ಬೆಳ್ತಂಗಡಿ ಘಟಕ ಅಧ್ಯಕ್ಷ ರಂಜಿತ್ ಎಚ್.ಡಿ. ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ಸ್ವಾತಿ ಜೇಸಿ ವಾಣಿ ಓದಿದರು. ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಉಪಾಧ್ಯಕ್ಷ ಪ್ರೀತಂ ಶೆಟ್ಟಿ, ಜತೆ ಕಾರ್ಯದರ್ಶಿ ರಾಮಕೃಷ್ಣ, ಸದಸ್ಯೆ ಅನನ್ಯ ಜೈನ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಶೈಲೇಶ್ ಕೆ., ಚಂದ್ರಹಾಸ ಬಳಂಜ, ಸದಸ್ಯ ಜಯರಾಜ್ ನಡಕ್ಕರ, ಹರಿಪ್ರಸಾದ್ ಪರಿಚಯಿಸಿದರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.
ಸಪ್ತಾಹದ ಗೌರವ
ಸಮಾಜ ಸೇವೆಗಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಸಪ್ತಾಹದ ಗೌರವ ಸನ್ಮಾನ, ಉದ್ಯಮ ಕ್ಷೇತ್ರದ ಸಾಧನೆಗಾಗಿ ಸಂಧ್ಯಾ ಪ್ರೆಶ್ ಇದರ ಸಿಇಒ ಅರ್ಚನಾ ರಾಜೇಶ್ ಪೈ ಅವರಿಗೆ ಸಾಧನಾ ಶ್ರೀ ಪ್ರಶಸ್ತಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಗೆ ಸೇವಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಸಂಘಟನಾತ್ಮಕವಾಗಿ ಸಮಾಜಮುಖಿ ಕೆಲಸಗಳನ್ನು ಹೇಗೆ ಮಾಡಬಹುದು ಎಂಬುದನ್ನು ನಿರಂತರವಾಗಿ ತೋರಿಸುತ್ತಾ ಬಂದಿದೆ. ಜಗತ್ತಿನಲ್ಲಿಯೇ ಹೆಚ್ಚು ಯುವಕರು ಇರುವ ದೇಶವಾದ ಭಾರತದಲ್ಲಿ ಯುವ ಜನಾಂಗ ದಾರಿ ತಪ್ಪಿ ಹೋಗದಂತೆ ನೋಡಿಕೊಳ್ಳುವಲ್ಲಿ ಜೆಸಿಐ ಪಾತ್ರ ಮಹತ್ವದ್ದಾಗಿದೆ. ಹರೀಶ್ ಪೂಂಜ, ಶಾಸಕ. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಸೇರಿಸಿಕೊಂಡು ವ್ಯಕ್ತಿತ್ವ ವಿಕಸನ ಮೂಲ ಧ್ಯೇಯವಾಗಿಸಿಕೊಂಡ ಜೆಸಿಐನ ಪಾತ್ರ ಸಮಾಜದಲ್ಲಿ ಸದಾ ಶ್ಲಾಘನೀಯ. ಯುವ ಸಮುದಾಯ ಇದರಲ್ಲಿ ತೊಡಗಿಸಿಕೊಳ್ಳಬೇಕು. ತುಂಗಪ್ಪ ಬಂಗೇರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ https://www.vijayavani.net/inauguration-of-kerala-library-council-training-institute https://www.vijayavani.net/ivan-dsouza