

ಬೆಳ್ತಂಗಡಿ: ದೈವಾರಾಧನೆ ತುಳುನಾಡ ನೈಜ ಸೇವೆ, ಯಕ್ಷಗಾನ ಭಾಷೆ, ಸಂಸ್ಕೃತಿ ಕೊಡುವ ಕಲೆಯಾಗಿದೆ. ಗ್ರಾಮೀಣರ ಮನಸ್ಸಲ್ಲಿ ಯಕ್ಷಗಾನ ಇನ್ನಷ್ಟು ಬೆಳಗಳು ಯಕ್ಷದ್ರುವ ಪಟ್ಲ ಫೌಂಡೇಷನ್‌ಗೆ ಬೆಳ್ತಂಗಡಿ ಘಟಕದ ಮೂಲಕ ಹತ್ತು ಕೋಟಿ ಮೊತ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಯಕ್ಷಸಂಭ್ರಮದ 2024ರ ರುವಾರಿ ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಹೇಳಿದರು.
ಶನಿವಾರ ಯಕ್ಷದ್ರುವ ಪಟ್ಲ ಫೌಂಡೇಷನ್ ಮಂಗಳೂರು ಬೆಳ್ತಂಗಡಿ ಘಟಕ ವತಿಯಿಂದ ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕ್ರೀಡಾಂಗಣದಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ ಎಂಬ ಮನಸ್ಸು ದೈವ ದೇವರು ಕೊಡಬೇಕೆ ಹೊರತು ಮನುಷ್ಯನಿಂದ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನ ತಾಯಿಯ ಆಶೀರ್ವಾದ, ನನ್ನ ಕುಟುಂಬದ ಆಶೀರ್ವಾದ, ನನ್ನ ಯಕ್ಷಗಾನ ಪ್ರೇಮಿಗಳ ಸಹಕಾರ ಇರುವ ತನಕ ಯಕ್ಷಗಾನವನ್ನು ಇನ್ನಷ್ಟು ಬೆಳೆಸಿ ಪ್ರೋತ್ಸಾಹ ನೀಡಲಾಗುವುದು. ಅದೃಷ್ಟ ಮತ್ತು ಕಲೆ ಮನುಷ್ಯನಿಗೆ ಒಲಿದು ಬರಬೇಕು ಇದನ್ನು ಹಣ ಕೊಟ್ಟು ಪಡೆಯಲು ಸಾಧ್ಯ ಇಲ್ಲ. ಮುಂದಿನ ದಿನಗಳಲ್ಲಿ ಕಲಾ ಕುಟುಂಬಕ್ಕೆ, ಕಲಾವಿದರ ಸೇವೆಗೆ ತನ್ನ ಸಮಯ ಮೀಸಲಿಡಲಾಗುವುದು ಎಂದರು.
ಯಕ್ಷದ್ರುವ-ಯಕ್ಷಶಿಕ್ಷಣ ಯೋಜನೆಯ ರೂವಾರಿ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಕಲೆ ಮತ್ತು ಕಲಾವಿದರ ಮನಸ್ಸು ಅರ್ಥಮಾಡಿದವರು ಉದ್ಯಮಿ ಶಶಿಧರ ಶೆಟ್ಟಿಯವರು. ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವ ಅವರಿಗೆ ದೇವರ ಅನುಗ್ರಹ ಇದೆ ಎಂದರು.
ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಯಕ್ಷ ಸಂಭ್ರಮ ಗೌರವ ನೀಡಿ ಗೌರವಿಸಲಾಯಿತು. ಗುರುವಾಯನಕೆರೆ ಬಂಟರ ಸಂಘದಿಂದ ದೇವರ ಅಲಂಕಾರದಿಂದ ಬೃಹತ್ ಮೆರವಣಿಗೆ ನಡೆಸಲಾಯಿತು. 42 ವಿಶೇಷ ಖಾದ್ಯಗಳೊಂದಿಗೆ ಯಕ್ಷಗಾನ ಕಲಾ ಪ್ರೇಕ್ಷಕರು ಸವಿ ರುಚಿ ಪಡೆದು ಯಕ್ಷಗಾನ ವೀಕ್ಷಿಸಿದರು.