ಹಸುವಿನ ಹೊಟ್ಟೆ ಸೀಳಿ, ಕಿವಿ-ಬಾಲ ಕೊಯ್ದು ವಾಮಾಚಾರ! ಬೆಚ್ಚಿಬಿದ್ದ ಸ್ಥಳೀಯರು

cow Witchcraft nelamnagal
Published on

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಬಗೆದು, ಕಿವಿ ಹಾಗೂ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಅಷ್ಟಕ್ಕೂ ಇಂತಜ ಅಮಾನವೀಯ ಘಟನೆ ನಡೆದಿರುವುದು ವಾಮಾಚಾರಕ್ಕಂತೆ! ಭೀಕರ ದೃಶ್ಯಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗೋಪಾಲಪ್ಪ ಎಂಬುವರಿಗೆ ಸೇರಿದ ಒಂದೂವರೆ ವರ್ಷದ ಹಸು ಬಲಿಯಾಗಿದೆ. ಹಸುವನ್ನ ಅಮಾನುಷವಾಗಿ ಕೊಂದು ಗೋಡೆ ಮೇಲೆ ರಕ್ತದಿಂದ ಚಿತ್ತಾರ ಬಿಡಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿರಿ ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಪ್ರೀತಿಯ ಕಿಚ್ಚು! ಪ್ರೇಯಸಿಯೊಂದಿಗೆ ಇರುವಾಗಲೇ ನಡೆಯಿತು ದುರಂತ

ಕಳೆದ ಭಾನುವಾರವೂ ಇದೇ ಮನೆಯಲ್ಲಿ ಪಾತಕಿಗಳು ಮತ್ತೊಂದು ಹಸುವಿನ ಕುತ್ತಿಗೆಯನ್ನ ಮುರಿದು ಕೊಲೆ ಮಾಡಿದ್ದರು. ಮಂಗಳವಾರ ತಡರಾತ್ರಿ ಇನ್ನೊಂದು ಹಸುವನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮೇಲ್ನೋಟಕ್ಕೆ ವಾಮಾಚಾರ, ಮಾಟಮಂತ್ರಕ್ಕಾಗಿ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net