

ಬಳ್ಳಾರಿ: ಕರೊನಾ ಲಾಕ್ಡೌನ್ನಿಂದ ಸುಮಾರು ಒಂದೂವರೆ ತಿಂಗಳಿಂದ ಮದ್ಯವಿಲ್ಲದೇ ಪರದಾಡಿದ್ದ ಕೆಲ ಕುಡುಕರು ಬಾಲ ಮುದುರಿದ ಬೆಕ್ಕಿನಂತಿದ್ದರು. ಇದೀಗ ವೈನ್ಶಾಪ್ ಓಪನ್ ಆಗಿದ್ದೇ ತಡ ತಮ್ಮ ವರಸೆ ಆರಂಭಿಸಿದ್ದಾರೆ.
ಕುಡುಕರ ಅವಾಂತರ ಒಂದಾ ಎರಡಾ ಎನ್ನುವ ಮಾತಿನಂತೆ ಇಲ್ಲೊಬ್ಬ ಮದ್ಯವ್ಯಸನಿ ಎಣ್ಣೆಯ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ. ಬಳ್ಳಾರಿಯ ಕೊಳಗಲ್ಲೂ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿದಾನಂದ ಎಂಬಾತನೇ ಬೆಂಕಿ ಹಚ್ಚಿದ್ದ ಭೂಪ.
ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಈತ ಕುಡಿದ ಮತ್ತಿನಲ್ಲಿ ತನ್ನ ಮನೆಯೊಳಗೆ ಕಡ್ಡಿ ಗೀರಿದ್ದಾನೆ. ಇದರಿಂದ ಬೆಂಕಿ ಬಟ್ಟೆಗೆ ಬಿದ್ದು, ಮನೆಯಲ್ಲಾ ಹಬ್ಬಿ, ವಸ್ತುಗಳು ಸಂಪೂರ್ಣ ಭಸ್ಮವಾಗಿದೆ. ಪತಿಯ ಅಮಲೇರಿದ ಕೆಲಸದಿಂದಾಗಿ ಅಜ್ಜಿಯು ಕಣ್ಣೀರಿಡುವಂತಾಗಿದ್ದು, ಚಿದಾನಂದ ಯಾರ ಕೈಗೂ ಸಿಗದೆ ಪರಾರಿಯಾಗಿದ್ದಾನೆ. (ದಿಗ್ವಿಜಯ ನ್ಯೂಸ್)