ರಾಜ್ಯದಲ್ಲಿ 3 ಸಾವಿರದತ್ತ ಸೋಂಕಿತರ ಸಂಖ್ಯೆ: 12 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ!

corona page
Published on

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕರೊನಾ ಸೋಂಕು 141 ಹೊಸದಾಗಿ ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 2922ಕ್ಕೆ ಏರಿದೆ. ಇವರ ಪೈಕಿ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ 90.

ಈ ಪೈಕಿ ಇಂದು ಆಸ್ಪತ್ರೆಯಿಂದ 103 ಮೂರು ಮಂದಿ ಡಿಸ್ಚಾರ್ಜ್​ ಆಗುವ ಮೂಲಕ ಒಟ್ಟು 997 ಮಂದಿ ಬಿಡುಗಡೆಗೊಂಡಿದ್ದು, 1874 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಓರ್ವ ಸಾವಿಗೀಡಾಗಿದ್ದು ಈವರೆಗೂ ರಾಜ್ಯದಲ್ಲಿ ಕರೊನಾ ಸಾವಿನ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 336 ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದರೆ, ಮಂಡ್ಯದಲ್ಲಿ (ಇಂದು ಒಂದು ಪ್ರಕರಣ ಪತ್ತೆಯಾಗಿಲ್ಲ) 257, ಕಲಬುರಗಿಯಲ್ಲಿ 253, ಯಾದಗಿರಿಯಲ್ಲಿ 241, ಉಡುಪಿಯಲ್ಲಿ 177, ದಾವಣಗೆರೆಯಲ್ಲಿ 150, ಬೆಳಗಾವಿಯಲ್ಲಿ 147, ಹಾಸನದಲ್ಲಿ 157, ಚಿಕ್ಕಬಳ್ಳಾಪುರದಲ್ಲಿ (ಇಂದು ಒಂದು ಪ್ರಕರಣ ಪತ್ತೆಯಾಗಿಲ್ಲ) 136. ರಾಯಚೂರಿನಲ್ಲಿ (ಇಂದು ಒಂದು ಪ್ರಕರಣ ಪತ್ತೆಯಾಗಿಲ್ಲ) 134, ಬೀದರ್​ನಲ್ಲಿ 130 ಹಾಗೂ ದಕ್ಷಿಣ ಕನ್ನಡದಲ್ಲಿ 111 ಸೋಂಕಿತರು ಇದುವರೆಗೆ ಪತ್ತೆಯಾಗುವ ಮೂಲಕ ಒಟ್ಟಾರೆ 12 ಜಿಲ್ಲೆಗಳಲ್ಲಿ ಸೋಂಕು ಶತಕ ಮೀರಿದೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net