More

    ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸೋತಿದೆ; ರಾಜ್ಯಪಾಲರ ತೀವ್ರ ಅಸಮಾಧಾನ, ಟೀಕೆ

    ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಕರೊನಾ ವೈರಸ್​, ಆಂಫನ್​ ಚಂಡಮಾರುತದಂತಹ ನೈಸರ್ಗಿಕ ವಿಪತ್ತಿನ ನಿರ್ವಹಣೆಯಲ್ಲಿ ಸಂಪೂಣ್ ವಿಫಲವಾಗಿದೆ ಎಂದು ಅಲ್ಲಿನ ರಾಜ್ಯಪಾಲ ಜಗದೀಪ್​ ಧಂಕರ್​ ಹೇಳಿದ್ದಾರೆ.

    ಪಶ್ಚಿಮಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್​ ಧಂಕರ್​ ನಡುವೆ ಕಳೆದ ಜುಲೈ ತಿಂಗಳಿನಿಂದಲೂ ಮುಸುಕಿನ ಗುದ್ದಾಟ ಇದ್ದೇ ಇದೆ. ಜಗದೀಪ್ ಅವರು ಅದೆಷ್ಟೋ ಬಾರಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಇದೀಗ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಕರೊನಾ ವೈರಸ್​ ಪ್ರಸರಣ ಹೆಚ್ಚಾಗಿ ಆಗುತ್ತಿದ್ದರೂ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಲಿಲ್ಲ. ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯದ ಕೊರತೆ ಎಷ್ಟಿದೆ ಎಂಬುದಕ್ಕೆ ಈ ಸಂದರ್ಭವೇ ಸಾಕ್ಷಿ. ಹಾಗೇ, ಆಂಫನ್​ ಚಂಡಮಾರುತ ಅಪ್ಪಳಿಸಿದಾಗಲೂ ಅದರ ನಿರ್ವಹಣೆಯಲ್ಲಿ ಸರ್ಕಾರ ಸೋತಿದೆ ಎಂದಿದ್ದಾರೆ.

    ಇದನ್ನೂ ಓದಿ: ‘ಪ್ರಜ್ಞಾ ಸಿಂಗ್​ ಎಲ್ಲಿ?’- ಮಿಸ್ಸಿಂಗ್ ಪೋಸ್ಟರ್​​ಗೆ ಬಿಜೆಪಿಯಿಂದ ಉತ್ತರ; ಆಸ್ಪತ್ರೆಗೆ ದಾಖಲಾಗಿದ್ದಾರೆ ಸಂಸದೆ

    ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರನ್ನು ಬೆದರಿಸುವುದು, ಹೆದರಿಸುವುದು ಒಂದು ಪರಿಪಾಠ ಆಗಿಬಿಟ್ಟಿದೆ. ನನಗೂ ಕೂಡ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್​ನ ಹಲವು ನಾಯಕರು ಬೆದರಿಕೆ ಹಾಕುತ್ತಾರೆ. ಈ ಗೂಂಡಾಗಿರಿಗಾಗಿಯೇ ಜನರನ್ನು ಆಡಳಿತ ಪಕ್ಷ ನೇಮಕ ಮಾಡಿಕೊಳ್ಳುತ್ತದೆ. ಅವರೇ ರಿಮೋಟ್​ ಕಂಟ್ರೋಲರ್​ಗಳಾಗಿರುತ್ತಾರೆ. ಇದಕ್ಕಾಗಿ ಸರ್ಕಾರ ಖಾಸಗಿಯವರಿಗೆ ಹೊರಗುತ್ತಿಗೆ ನೀಡಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಏನಾದರೂ ಇಂತಹ ಚಟುವಟಿಕೆಗಳು ತೀರ ಅಪಾಯಕಾರಿ ಪ್ರವೃತ್ತಿಗಳು ಎಂದು ಜಗದೀಪ್ ಧಂಕರ್​ ಮುಕ್ತವಾಗಿ ಮಾತನಾಡಿದ್ದಾರೆ.

    ಅಷ್ಟೇ ಅಲ್ಲ, ತೃಣಮೂಲ ಕಾಂಗ್ರೆಸ್​ನ ಕೆಲವು ಹಿರಿಯ ರಾಜಕಾರಣಿಗಳು ನನ್ನೊಂದಿಗೆ ಒಳ್ಳೆಯ ಸ್ನೇಹದಿಂದ ಇದ್ದಾರೆ. ಅವರೂ ನನ್ನಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಮ್ಮ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗಳೇ ತೆಗೆದುಕೊಳ್ಳುತ್ತವೆ ಎಂದು ಅಳಲು ತೋಡಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್​ನಲ್ಲಿ ಹಿರಿಯ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲೂ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವಂತಿಲ್ಲ ಎಂದು ರಾಜ್ಯಪಾಲರು ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಹಲ್ಲುನೋವೆಂದು ಆಸ್ಪತ್ರೆಗೆ ಹೋದ ಬಾಲಕಿಯ ಕಣ್ಣಿಗೆ ಬಲವಾಗಿ ಹೊಡೆದ ದಂತವೈದ್ಯ

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಳ್ಳೆಯವರೇ. ಆದರೇನು ಮಾಡುವುದು ಆಕೆ ಯೋಧನಂತೆ ಇರುವುದಿಲ್ಲ..ಬದಲಿಗೆ ಜನರಲ್​ ನಂತೆ ವರ್ತಿಸುತ್ತಾಳೆ ಎಂದು ಹೇಳಿದ್ದಾರೆ. ಹಾಗೇ, ಓರ್ವ ರಾಜ್ಯಪಾಲನಾಗಿ ಸರ್ಕಾರದೊಂದಿಗೆ ನಿಲ್ಲುವುದು ನನ್ನ ಕರ್ತವ್ಯ. ಆದರೆ ಸರ್ಕಾರ ರಾಜ್ಯಕ್ಕೆ ಬರುವ ಆಪತ್ತು, ವಿಪತ್ತುಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವುದೇ ಬೇಸರ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್​ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts