

ಮಡಿಕೇರಿ: ಹಲ್ಲಿನ ಚಿಕಿತ್ಸೆಗೆ ಹೋಗಿದ್ದ ಪುಟ್ಟ ಬಾಲಕಿಗೆ ದಂತ ವೈದ್ಯ ಬಲವಾಗಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ನಡೆದಿದ್ದು ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ. ಇಲ್ಲಿನ ಸೀಗೆತೋಡು ನಿವಾಸಿ ಸುಧಾಕರ್ ಅವರ ಪುತ್ರಿ ತೀರ್ಥ (10) ಹಲ್ಲೆಗೊಳಗಾದ ಬಾಲಕಿ. ಈಕೆಗೆ ಹಲ್ಲು ನೋವೆಂದು ವೈದ್ಯರ ಬಳಿ ಹೋದಾಗ, ಆ ವೈದ್ಯ ಕಣ್ಣಿಗೆ ಹೊಡೆದಿದ್ದಾರೆ ಎಂದು ಪಾಲಕರು ಆರೋಪಿಸಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿಯ ಕಣ್ಣು ಕೆಂಪಾಗುವಷ್ಟು ಏಟು ಬಿದ್ದಿದೆ. ವೈದ್ಯರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)