ಕರೊನಾ ತಗುಲಿರಬಹುದೆಂಬ ಶಂಕೆಯಿಂದ ವ್ಯಕ್ತಿ ನೇಣಿಗೆ ಶರಣು

Man Sucide
Published on

ಮಂಗಳೂರು: ಮಹಾಮಾರಿ ಕರೊನಾ ವೈರಸ್​ ಸೋಂಕು ತಗುಲಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಭಯಗೊಂಡು ವ್ಯಕ್ತಿಯೊರ್ವ ನೇಣಿಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಅಬ್ಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ.

ಸದಾಶಿವ ಶೆಟ್ಟಿ (56) ಮೃತ ವ್ಯಕ್ತಿ. ಅಬ್ಬೆಟ್ಟು ಗ್ರಾಮದ ನಿವಾಸಿಯಾಗಿದ್ದ ಸದಾಶಿವ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಕರೊನಾ ತಗುಲಿರಬಹುದೆಂದು ಭಯಗೊಂಡಿದ್ದರು. ತನ್ನಿಂದ ಮನೆಯವರಿಗೂ ಹರಡಬಹುದೆಂಬ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಮನೆಯಲ್ಲಿಯೂ ಕರೊನಾ ಭೀತಿ ಬಗ್ಗೆ ಹೇಳಿಕೊಂಡಿದ್ದ ಸದಾಶಿವ, ಅದೇ ಬೇಸರದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತನ ಪತ್ನಿಯ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net