More

    ಇವರೆಂಥಾ ಬೇಜವಾಬ್ದಾರಿಯುತ ಐಎಎಸ್​ ಅಧಿಕಾರಿ..! ಹೋಂ ಕ್ವಾರೆಂಟೈನ್​ನಿಂದ ಹೇಳದೆ ಕೇಳದೆ ಕಾನ್ಪುರಕ್ಕೆ ಪರಾರಿ…

    ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಹೋಂ ಕ್ವಾರೆಂಟೈನ್​ನಲ್ಲಿದ್ದ ಸಬ್​ ಕಲೆಕ್ಟರ್​ ಪರಾರಿಯಾಗಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    2016ರ ಬ್ಯಾಚ್​ನ ಐಎಎಸ್​ ಅಧಿಕಾರಿಯಾಗಿರುವ ಅನುಪಮ್​ ಮಿಶ್ರಾ ಹೀಗೆ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ.

    ಎಲ್ಲೆಲ್ಲೂ ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ವಾಪಸ್​ ಬಂದವರನ್ನು, ಅವರ ಸಂಪರ್ಕಕ್ಕೆ ಹೋದವರನ್ನೆಲ್ಲ ಹೋಂ ಕ್ವಾರೆಂಟೈನ್​ನಲ್ಲಿ (ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರಬೇಕು) ಇಡಲಾಗಿದೆ. ಈ ಸಮಯದಲ್ಲಿ ಅವರು ಹೊರಗೆಲ್ಲೂ ಹೋಗಬಾರದು. ಸಾರ್ವಜನಿಕರ ಸಂಪರ್ಕಕ್ಕೆ ಬರಬಾರದು. ಈ ನಿಯಮ ಮೀರಿದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬಹುದಾಗಿದೆ.

    ಆದರೆ ಕೆಲವು ವಿಐಪಿಗಳೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಜವಾಬ್ದಾರಿಯಿಂದ ಇರಬೇಕಾದ ಸಬ್​ ಕಲೆಕ್ಟರ್​ ಹೀಗೆ ವರ್ತನೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

    ಕೊಲ್ಲಂನ ಸಬ್​ ಕಲೆಕ್ಟರ್ ಆಗಿರುವ ಅನುಪಮ್​ ಮಿಶ್ರಾ ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಕೆಲವು ದಿನಗಳ ಹಿಂದೆ ರಜೆ ಕಳೆಯಲು ಸಿಂಗಾಪುರಕ್ಕೆ ಹೋಗಿದ್ದರು. ಅಲ್ಲಿಂದ ಕಾನ್ಪುರಕ್ಕೆ ಬಂದು, ಅಲ್ಲಿಂದ ಕರ್ತವ್ಯಕ್ಕೆ ಕೊಲ್ಲಂಗೆ ಆಗಮಿಸಿದ್ದರು. ವಿದೇಶ ಪ್ರಯಾಣದ ಹಿಸ್ಟರಿ ಇರುವುದರಿಂದ ಅವರನ್ನು ಕೊಲ್ಲಂನಲ್ಲೇ ಹೋಂ ಕ್ವಾರೆಂಟೈನ್​ನಲ್ಲಿ ಇಡಲಾಗಿತ್ತು. ಮಾ.19ರಿಂದ 14 ದಿನಗಳ ಕಾಲ ಅವರು ಮನೆಯಲ್ಲಿ ಕರೊನಾ ನಿಗಾವಣೆಯಲ್ಲಿ ಇರಬೇಕಿತ್ತು. ಆದರೆ ಅವರು ಕೇರಳ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಏಕಾಏಕಿ ಕಾನ್ಪುರದ ತಮ್ಮ ಮನೆಗೆ ಓಡಿಹೋಗಿದ್ದಾರೆ.

    ಐಎಎಸ್​ ಅಧಿಕಾರಿ ನಾವು ಕರೆ ಮಾಡಿದರೆ ರಿಸೀವ್​ ಮಾಡುತ್ತಿಲ್ಲ. ಅವರ ಸಿಮ್​ ಟ್ರೇಸ್​ ಮಾಡಿದಾಗ ಕಾನ್ಪುರದಲ್ಲಿ ಇದ್ದಿದ್ದು ತಿಳಿದು ಬಂದಿದೆ. ಹಾಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಲಂನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕೇರಳದಲ್ಲಿ ಹೋಂ ಕ್ವಾರೆಂಟೈನ್​ ಮೀರಿದ ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಲಾಕ್‌ಡೌನ್‌ ಲಕ್ಷ್ಮಣ ರೇಖೆಯನ್ನು ದಾಟುವಿರಾ?- ಕಾನೂನು ಸಂಕಷ್ಟದ ಸುಳಿಗೆ ಬೀಳುವುದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts