

1. ಸೆಕ್ಷನ್ 188
ಸರ್ಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ, ಯಾವುದೇ ರೀತಿಯಲ್ಲಿ ಅಡಚಣೆ ಉಂಟು ಮಾಡಿದರೆ ಅಂಥ ವ್ಯಕ್ತಿಗೆ ಒಂದು ತಿಂಗಳವರೆಗೆ ಶಿಕ್ಷೆ, 200 ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಕಾನೂನಿನ ಅಡಿ ಇದೆ.
ಈ ರೀತಿಯಲ್ಲಿ ತೊಂದರೆ ಉಂಟುಮಾಡಿದ ಸಂದರ್ಭದಲ್ಲಿ ಯಾರದ್ದಾದರೂ ಜೀವಕ್ಕೆ, ಆರೋಗ್ಯಕ್ಕೆ ಅಥವಾ ಸುರಕ್ಷತೆಗೆ ಅಪಾಯ ಎದುರಾದಲ್ಲಿ, ಅಪರಾಧಿಗೆ ಆರು ತಿಂಗಳವರೆಗೆ ಶಿಕ್ಷೆ, ಒಂದು ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ.
2. ಸೆಕ್ಷನ್ 269
ಇತರರಿಗೆ ಸೋಂಕು ತಗಲುವ ಸಾಧ್ಯತೆ ಇರುವ ಯಾವುದಾದರೂ ಕಾಯಿಲೆ ಅಥವಾ ರೋಗಕ್ಕೆ ಗುರಿಯಾಗಿರುವ ವ್ಯಕ್ತಿ ಉದ್ದೇಶಪೂರ್ವಕವಾಗಿ ಅದನ್ನು ಹರಡಲು ಮುಂದಾದರೆ, ಅಂಥ ವ್ಯಕ್ತಿಗೆ ಆರು ತಿಂಗಳವರೆಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುವುದು.
3. ಸೆಕ್ಷನ್ 271
ಕ್ವಾರಂಟೈನ್‌ನಲ್ಲಿ ಇರಬೇಕು ಎಂಬುದು ತಿಳಿದಿದ್ದರೂ, ಅದನ್ನು ಉಲ್ಲಂಘನೆ ಮಾಡಿದರೆ ಅಂಥ ವ್ಯಕ್ತಿಗೆ ಆರು ತಿಂಗಳವರೆಗೆ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಈ ಸೆಕ್ಷನ್‌ನಲ್ಲಿ ಇದೆ.
1. ಸೆಕ್ಷನ್ 51 (ಬಿ)
ಕೇಂದ್ರ ಅಥವಾ ರಾಜ್ಯ ಸರ್ಕಾರ ಹೊರಡಿಸಿರುವ ಯಾವುದೇ ಆದೇಶವನ್ನು ಉಲ್ಲಂಘಿಸಿದರೆ ಅಂಥ ವ್ಯಕ್ತಿಗೆ ಒಂದು ವರ್ಷದವರೆಗೆ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
2. ಸೆಕ್ಷನ್ 54
ಜನರಿಗೆ ಗಾಬರಿ ಹುಟ್ಟಿಸುವಂಥ ಯಾವುದೇ ಸುಳ್ಳು ಸುದ್ದಿಯನ್ನು ಹರಡಿಸದರೆ ಅಂಥ ವ್ಯಕ್ತಿಗೆ ಒಂದು ವರ್ಷದವರೆಗೆ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
3. ಸೆಕ್ಷನ್ 55
ಸರ್ಕಾರದ ಯಾವುದೇ ಇಲಾಖೆಯಲ್ಲಿ ಇಂಥ ಕೃತ್ಯ ಎಸಗಿದರೆ, ಆ ಇಲಾಖೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು. ಒಂದು ವೇಳೆ ಅದೇ ಇಲಾಖೆಯ ಬೇರೆ ಯಾವುದೇ ಅಧಿಕಾರಿಯ ಸಲಹೆ ಮೇರೆಗೆ ಅಥವಾ ಆತನ/ಆಕೆಯ ತಿಳಿವಳಿಕೆಯ ಮೇಲೆ ಕೃತ್ಯ ಎಸಗಿದ್ದರೆ ಅಂಥವರನ್ನು ಹೊಣೆಗಾರರನ್ನಾಗಿಸಲಾಗುವುದು.
4 ಸೆಕ್ಷನ್ 56
ಯಾವುದಾದರೂ ಅಧಿಕಾರಿಗೆ ಕರ್ತವ್ಯ ನೀಡಿದ ಸಂದರ್ಭದಲ್ಲಿ ಅದನ್ನು ನಿರ್ವಹಿಸಲು ಅವರು ವಿಫಲರಾದರೆ ಅಥವಾ ಯಾರ ಗಮನಕ್ಕೂ ತಾರದೆ ಆ ಕರ್ತವ್ಯದಿಂದ ಹಿಂದಕ್ಕೆ ಸರಿದರೆ, ಅಂಥವರಿಗೆ ವರ್ಷದವರೆಗೆ ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.