

ಬೆಂಗಳೂರು: ಹೆಬ್ಬಾಳದ ಎಚ್ಬಿಆರ್ ಬಡಾವಣೆ ಆವರಣದಲ್ಲಿ 60 ಎಂಎಲ್ಡಿ ತ್ಯಾಜ್ಯ ನೀರಿನ ಸಂಸ್ಕರಣ ಘಟಕ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಎಚ್ಬಿಆರ್ ಬಡಾವಣೆ, ಲಿಂಗರಾಜಪುರ, ಕೆ.ಜಿ.ಹಳ್ಳಿ, ಕಲ್ಯಾಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಕೊಳವೆ ಮಾರ್ಗಗಳಿಂದ ಆಗಾಗ್ಗೆ ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿದ್ದು, ಮಳೆಗಾಲದಲ್ಲಿ ತ್ಯಾಜ್ಯ ನೀರು ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಹರಿಯುತ್ತಿರುತ್ತದೆ. ಈ ಯೋಜನೆಯಿಂದ ಎಚ್ಬಿಆರ್ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಉಕ್ಕಿ ಹರಿಯುವುದನ್ನು ನಿಯಂತ್ರಿಸಬಹುದಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಇಂಜಿನಿಯರ್ಗಳಾದ ಎಂ.ದೇವರಾಜು, ಎಲ್.ಕುಮಾರ ನಾಯಕ್, ಅಪರ ಮುಖ್ಯ ಇಂಜಿನಿಯರ್ ಬಿ.ಎಸ್.ಜಯಲಕ್ಷ್ಮಿ ಇನ್ನಿತರರಿದ್ದರು.