CM Siddaramaiah ಇರೋವರಗೆ ಮುಸ್ಲಿಮರು ಏನಾದ್ರು ಮಾಡಿಕೊಳ್ಳಬೇಕು, ಆ ನಂತರ ನಮಗೆ ಚೊಂಬೆ ಗತಿ: ಮಾಜಿ ಸಚಿವ Iqbal Ansari

Iqbal Ansari
Published on

ಕೊಪ್ಪಳ: ಉಪಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ವಕ್ಛ್​ ವಿವಾದ (Waqf Controversy) ಕಾಂಗ್ರೆಸ್​ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ವಿಪಕ್ಷವಾದ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಸಚಿವ ಜಮೀರ್​ ಅಹ್ಮದ್​ (Zameer Ahmad) ವಿರುದ್ಧ ತಿರುಗಿ ಬಿದ್ದಿರುವ ನಡುವೆಯೇ ಕಾಂಗ್ರೆಸ್​ ಪಕ್ಷದ (Congress Party) ಮಾಜಿ ಶಾಸಕರೊಬ್ಬರು ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದವನ್ನು ಹುಟ್ಟು ಹಾಕುವುದು ಪಕ್ಕಾ ಆಗಿದೆ.

ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ (Iqbal Anasari) ಸಿಎಂ ಸಿದ್ದರಾಮಯ್ಯ (CM Siddaramaiah) ಇರೋವರಗೆ ಮುಸ್ಲಿಮರು ಏನಾದ್ರು ಮಾಡಿಕೊಳ್ಳಬೇಕು, ಆ ನಂತರ ನಮಗೆ ಚೊಂಬೆ ಗತಿ ಎಂದು ಹೇಳಿದ್ದಾರೆ. ಇದಲ್ಲದೆ ಮುಖಂಡರು ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 100 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನಡೆದ ಸ್ವಾತಂತ್ರ ಹೋರಾಟಗಾರರ ಜಯಂತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ (Iqbal Ansari), ಸಿಎಂ ಸಿದ್ದರಾಮಯ್ಯ ಇರೋವರಗೆ ಮುಸ್ಲಿಮರು ಏನಾದ್ರು ಮಾಡಿಕೊಳ್ಳಬೇಕು. ಅವರ ನಂತರ ನಮಗೆ ಚೊಂಬೆ ಗತಿಯಾಗುತ್ತೆ.‌

ಪ್ರತಿ ಆರು ತಿಂಗಳಿಗೊಮ್ಮೆ ಹೋಗಿ ನೂರು ಕೋಟಿ ಅನುದಾನ ತರಬೇಕು. ಅನುದಾನ ತಂದು ಸಮಾಜದ ಕೆಲಸ ಮಾಡಿಕೊಳ್ಳಬೇಕು. ಸಿಎಂ ಸಾಹೇಬರು ಇರೋವರಗೆ ನಾವು, ನೀವು ನಮ್ಮ ಸಮಾಜ ಏನಾದ್ರು ಮಾಡಿಕೊಳ್ಳಬೇಕು. ಅವರ ನಂತರ ನಮ್ಮ ಸಮಾಜಕ್ಕೆ ಚೊಂಬೆ ಗತಿಯಾಗುತ್ತದೆ. ನನಗೆ ಸಿದ್ದರಾಮಯ್ಯ (CM Siddaramaiah) ಮಾತ್ರ ನಾಯಕ. ರಾಹುಲ್ ಗಾಂಧಿ, ಸೋನಿಯಾ ಗಾಂಧಿರನ್ನು ಕೂಡಾ ನಾನು ನನ್ನ ನಾಯಕ ಅಂತ ಒಪ್ಪಿಕೊಂಡಿಲ್ಲಾ ಎಂದು ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net