ಬೆಂಗಳೂರು: ತರಲೆ, ತುಂಟಾಟ, ಮನಸ್ತಾಪದಿಂದಲೇ ಕಿರುತೆರೆ ಲೋಕದಲ್ಲಿ ಸಾಕಷ್ಟು ಸದ್ದು ಮಾಡಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಮನರಂಜನೆಯ ಫ್ಯಾಕ್ಟರ್ ಎಂದೇ ಹೇಳಲಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದೆ. ಇನ್ನು ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ನಡೆಸಿಕೊಡುವ ಪಂಚಾಯ್ತಿಯಲ್ಲಿ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಲಾಗುವುದು. ಅದರಂತೆ ಸುದೀಪ್ ಅವರು ಸ್ಫರ್ಧಿಗಳಿಗೆ ಟಾಸ್ಕ್ ಮತ್ತು ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಇದೀಗ ಸುದೀಪ್ ಕೇಳಿರುವ ಪ್ರಶ್ನೆ ಸ್ಫರ್ಧಿ ಧರ್ಮ (Dharma Keerthiraj) ಅವರ ಮನಸ್ಸನ್ನು ನುಚ್ಚು ನೂರು ಮಾಡಿದೆ.
ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ನಿರೂಪಕ ಸುದೀಪ್ (Kichcha Sudeep) ಅವರು ಮನೆಮೆಚ್ಚಿದ ನಾಲಾಯಕ್ ಎಂದು ಸ್ಫರ್ಧಿಗಳಿಗೆ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಸ್ಫರ್ಧಿಗಳ ಪೈಕಿ ಬಹುತೇಕರು ಧರ್ಮ ಕೀರ್ತಿರಾಜ್ (Dharma Keerhiraj) ಅವರ ಹೆಸರನ್ನು ಹೇಳುತ್ತಾರೆ. ಮನೆಯವರು ಅದಕ್ಕೆ ನೀಡಿದ ಕಾರಣ ಕೇಳಿ ಧರ್ಮ ಕೀರ್ತಿರಾಜ್ ಅವರ ಮನಸ್ಸು ಹೊಡೆಯುವಂತೆ ಮಾಡಿದೆ.
ಮನೆಯವರು ಕೊಟ್ಟ ಅವಾರ್ಡ್‌ನಿಂದ ಘಾಸಿ ಆಯ್ತಾ ಧರ್ಮ ಮನಸ್ಸು?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/mUoZeAeqVx
— Colors Kannada (@ColorsKannada) November 10, 2024
ಸುದೀಪ್ ಅವರ ಪ್ರಶ್ನೆಗೆ ಹನುಮಂತು, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಮಂಜು ಮಾತನಾಡಿದ್ದು, ಮುನ್ನುಗ್ಗಿ ಹೋಗುವ ಗುಣ ಇಲ್ಲ ಎಂದು ಹೇಳಿದ್ರು. ಅವರ ತನವನ್ನು ಬಿಟ್ಟುಕೊಟ್ಟು ಆಟವಾಡ್ತಿದ್ದಾರೆ. ಟಾಸ್ಕ್ ಆಡುವ ವೇಳೆ ಯಾವ ರೀತಿ ಆಡಬೇಕೆಂದು ನಮ್ಮನ್ನ ಕೇಳಿದ್ರು ಎಂದೆಲ್ಲಾ ಕಾರಣವನ್ನು ನೀಡಿದ್ದಾರೆ. ನಾಲಾಯಕ್ ಅವಾರ್ಡ್ ಪಡೆದ ಧರ್ಮ ಕೀರ್ತಿರಾಜ್ ಅದೇನೋ ಮಹಾನ್ ತಪ್ಪು ನಾನು ಮಾಡಿಲ್ಲ. ಅದೇ ಒಂದು ರೀಸನ್ ಇಟ್ಕೊಂಡು ಪ್ರತಿ ಬಾರಿ ಹೇಳಿದ್ರೆ ನನಗೂ ಬೇಸರವಿದೆ. ಎಲ್ಲರೂ ಅವರ ಫೀಲ್ಡ್ ನಲ್ಲಿ ಕಷ್ಟಪಟ್ಟು ಮುಂದೆ ಬಂದಿರ್ತಾರೆ. ಆ ವರ್ಡ್ ನನಗೆ ತುಂಬಾ ನಾಟಿದೆ, ಮನಸ್ಸಿಗೆ ಚುಚ್ಚಿದೆ ಎಂದು ರಾತ್ರಿ ಸ್ಪರ್ಧಿಗಳಾದ ಶಿಶಿರ್, ಐಶ್ವರ್ಯಾ ಬಳಿ ಹೇಳಿಕೊಂಡಿದ್ದಾರೆ.
ಮನೆಯವರು ಕೊಟ್ಟ ಅವಾರ್ಡ್‌ನಿಂದ ಘಾಸಿ ಆಯ್ತಾ ಧರ್ಮ ಮನಸ್ಸು? ಎಂದ ಶೀರ್ಷಿಕೆಯಡಿ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರು ಸಂಚಿಕೆಯನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ವಾರದ ನಾಮಿನೇಷನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೋಟಿಂಗ್ ಲೈನ್ಸ್ ತೆರೆದಿಲ್ಲದಿರುವುದು ವೀಕ್ಷಕರ ತಲೆಕೆಡಿಸಿದೆ. ಈ ವಾರ ಬಿಗ್ಬಾಸ್ (Bigg Boss) ಎಲಿಮಿನೇಷನ್ ಇದೆಯಾ ಇಲ್ಲವಾ ಎಂದು ಕಾದು ನೋಡಬೇಕಿದೆ.
Champions Trophy ವಿಚಾರವಾಗಿ ಪಟ್ಟು ಸಡಿಲಿಸದ ಭಾರತ; BCCI ವಿರುದ್ಧ Court ಮೆಟ್ಟಿಲೇರಲು ಸಜ್ಜಾದ ಪಾಕಿಸ್ತಾನ
ವಿಚಾರಣೆಗೆ ಬಂದಿದ್ದ ಆರೋಪಿ Police ಠಾಣೆಯಲ್ಲೇ ಸಾವು; ಪ್ರಕರಣ ಸಿಐಡಿಗೆ ವರ್ಗಾವಣೆ