

ಪುತ್ತೂರು ಗ್ರಾಮಾಂತರ: ಅಗ್ನಿವೀರ್ ಆಗಿ ಆಯ್ಕೆಗೊಂಡು ಸೇವೆ ಸಲ್ಲಿಸಲು ತೆರಳುತ್ತಿರುವ ಮಾಡ್ನೂರು ಗ್ರಾಮದ ಕಾವು ಮಾಣಿಯಡ್ಕ ನಿವಾಸಿ ಚಂದ್ರಶೇಖರ ಮತ್ತು ಗೀತಾ ದಂಪತಿ ಪುತ್ರ ಅವಿನ್ ಎಂ. ಅವರನ್ನು ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಇತ್ತೀಚೆಗೆ ಅಭಿನಂದಿಸಲಾಯಿತು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಅಭಿನಂದಿಸಿದರು. ಅವಿನ್ ತಂದೆ ಚಂದ್ರಶೇಖರ್ ಮತ್ತು ತಾಯಿ ಗೀತಾ ಜತೆಗಿದ್ದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ, ಗೌರವ ಸಲಹೆಗಾರ ಚಂದ್ರಶೇಖರ ರಾವ್ ನಿಧಿಮುಂಡ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಕೊಚ್ಚಿ, ಮಾಜಿ ಅಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯರಾದ ಚಂದ್ರಶೇಖರ ಪಾಟಾಳಿ ಪಟ್ಟುಮೂಲೆ, ಕೇಶವ ಮೂರ್ತಿ, ಧನಂಜಯ ನಾಯ್ಕ, ನಹುಷಾ ಭಟ್, ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಚಿತ್ರ ಪ್ರಸಾದ್ ರೈ ಅಂಕೊತ್ತಿಮಾರು, ನಾರಾಯಣ ಆಚಾರ್ಯ ಮಳಿ, ಸಂಕಪ್ಪ ಪೂಜಾರಿ, ನಿರಂಜನ ಕಮಲಡ್ಕ, ವಿಶ್ವನಾಥ ಕೆರೆಮಾರು, ಸಂದೇಶ್ ಚಾಕೋಟೆ, ಪ್ರಜ್ವಲ್ ಕೆರೆಮಾರು ಮತ್ತಿತರರು ಉಪಸ್ಥಿತರಿದ್ದರು.