ಮೂಲ್ಕಿ: ಮೂಲ್ಕಿ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಮೂಲ್ಕಿ ತಾಲೂಕು ಯೋಜನಾ ಶಾಖೆಗಳ ನಿರ್ದೇಶಕರ ಆಯ್ಕೆಗಾಗಿ ಅ.28ರಂದು ಚುನಾವಣೆ ನಡೆಯಲಿದೆ. ಅ.9ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, 18ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ನಾಮಪತ್ರ ವಾಪಸ್ ಪಡೆಯಲು ಅ.21 ಕೊನೆಯ ದಿನಾಂಕವಾಗಿದ್ದು, 28ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅದೇ ದಿನ ಚುನಾವಣೆ ಮುಕ್ತಾಯದ ಬಳಿಕ ಮತ ಎಣಿಕೆ ನಡೆದು ಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ, ನಿವೃತ್ತ ಶಿಕ್ಷಕಿ ರೋಸಿ ಫರ್ನಾಂಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.