

ಕಡಬ: ಕಡಬ ತಾಲೂಕಿನ ಕೊಲ, ರಾಮಕುಂಜ, ಹಳೆನೇರೆಂಕಿ ಗ್ರಾಮಗಳನ್ನೊಳಗೊಂಡ ರಾಮಕುಂಜ ವಲಯ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ ಶಾರದೋತ್ಸವ ರಾಮಕುಂಜ ಗ್ರಾಮದ ಶಾರದಾ ಭಜನಾ ಮಂದಿರದಲ್ಲಿ ಅಕ್ಟೋಬರ್ 10ರಿಂದ 12ರ ತನಕ ನಡೆಯಿತು.
ಶನಿವಾರ ಬೆಳಗ್ಗೆ ಸರಸ್ವತಿ ಪೂಜೆ, ವಿದ್ಯಾರಂಭ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಭಜನೆ, ಮಹಾಪೂಜೆ, ಬಳಿಕ ಸಮಿತಿಯ ಅಧ್ಯಕ್ಷ ಗಣೇಶ್ ಜಿ.ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ರಾಮಕುಂಜ ಗ್ರಾ.ಪಂ ಸದಸ್ಯ ಸೂರಪ್ಪ ಕುಲಾಲ್ ಬರಮೇಲು, ರಾಮಕುಂಜದ ಉದ್ಯಮಿ ಶಿವಪ್ರಸಾದ್ ಇಜ್ಜಾವು, ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲಾ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ರತ್ನ ಕುಮಾರಿ ಎಚ್.ಪಿ.ಅತಿಥಿಗಳಾಗಿ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ವಾಸುದೇವ ಕುಲಾಲ್ ಉಪಸ್ಥಿತರಿದ್ದರು.
ನೀಕ್ಷಿತ್ ಶಾರದ ನಗರ ಸ್ವಾಗತಿಸಿ, ಸುಮಲತಾ ಇರ್ಕಿ ವಂದಿಸಿದರು. ಜಯಪ್ರಕಾಶ್ ಅಮೈ ನಿರೂಪಿಸಿದರು. ವಿವಿಧ ಮಹಿಳಾ ಮತ್ತು ಪುರುಷ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಶಾರದಾ ನಗರದಿಂದ, ಗೋಳಿತ್ತಡಿ, ಗಣೇಶ ನಗರ ಮೂಲಕ ಆತೂರಿನ ವರೆಗೆ ಶಾರದಾಂಬೆಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಶಾರದೋತ್ಸವ ಸಮಿತಿ ಜತೆಕಾರ್ಯದರ್ಶಿ ಯತೀಶ್ ಬರಮೇಲು, ಕೋಶಾಧಿಕಾರಿ ರಾಜೇಶ್ ಇರ್ಕಿ, ಉಪಾಧ್ಯಕ್ಷರಾದ ಶಶಿಧರ ಇರ್ಕಿ, ಆಶೋಕ್ ಕೊಲ, ಶೇಖರ ಕಟ್ಟಪುಣಿ, ಲಕ್ಷ್ಮೀನಾರಾಯಣ ರಾವ್ ಆತೂರು, ಸಾಂಸ್ಕೃತಿಕ ಕಾರ್ಯದರ್ಶಿ ಪ್ರತ್ಯಕ್ಷ ಎ.ಆರ್., ಭಜನಾ ಕಾರ್ಯದರ್ಶಿ ರಾಮಚಂದ್ರ ದೇವಾಡಿಗ ಹೂಂತಿಲ, ಕ್ರೀಡಾಕಾರ್ಯದರ್ಶಿ ವಿಜಯ ಬರಮೇಲು, ಗೌರವ ಸಲಹೆಗಾರರಾದ ಗಣರಾಜ ಕುಂಬ್ಳೆ , ಎ.ಎನ್.ಕೊಳಂಬೆ, ರಮೇಶ್ ಎನ್.ಸಿ., ಎಚ್.ವೆಂಕಟೇಶ್ ಭಟ್ ಮೊದಲಾದರು ಇದ್ದರು.
ನಿವೃತ್ತ ಸೈನಿಕ ಕೃಷ್ಣಪ್ರಸಾದ್ ವಾಟೆಡ್ಕ, ಸಿ.ಎ.ಅಕೌಟೆಂಟ್ ಹೃಷಿಕೇಶ ಶರ್ಮ ಕೆ., ನೀಟ್ ಪ್ರವೇಶ ಪರೀಕ್ಷೆಯ ಪ್ರತಿಭೆ ಯುಕ್ತ ವಿ.ಜಿ, ಕುಣಿತ ಭಜನಾ ಶಿಕ್ಷಕ ಭರತ್ ಕುಮಾರ್ ಕಾಳೂರು ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆದಿತ್ಯ ಹಳೆನೇರಿಂಕಿ, ಗಗನ್ ಕೆ.ಆರ್.ಆಲಂಕಾರು, ಪಿಯುಸಿಯಲ್ಲಿ ಪ್ರೀತಿಕಾ ಡಿಸೋಜ ರಾಮಕುಂಜ, ಸಮೀಕ್ಷಾ ಪಾಣಿಗ, ಜೀವನ್ ಎಸ್.ಸಂಪ್ಯಾಡಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.