ವೆಂಕಟರಾಜ ಪುಣಿಂಚಿತ್ತಾಯ ಜನ್ಮದಿನಾಚರಣೆ

nitte
Published on

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ತುಳು ವಿದ್ವಾಂಸ, ಸಂಶೋಧಕರಾಗಿದ್ದ ದಿ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜನ್ಮದಿನ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಶ್ರುತಿ ಅಮೀನ್ ಮಾತನಾಡಿ, ತುಳುವಿಗೊಂದು ಲಿಪಿಯಿದೆ. ಈ ಲಿಪಿಯಲ್ಲಿ ಹಳೆಯ ಗ್ರಂಥಗಳಿವೆ ಎಂಬುದನ್ನು ಹೊರಲೋಕಕ್ಕೆ ತಿಳಿಯಪಡಿಸಿದವರು ಪುಣಿಂಚಿತ್ತಾಯರು. ಶಬ್ದಗಳ ಅರ್ಥದ ಕುರಿತು ವಿಶೇಷ ವಿಶ್ಲೇಷಣೆ, ತುಳು ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ ಎಂದರು.

ವಿಜಯಲಕ್ಷ್ಮೀ ಕಟೀಲು, ಪ್ರವೀಣ ಅಮ್ಮೆಂಬಳ ಅವರು ಪುಣಿಂಚಿತ್ತಾಯ ಅವರಿಂದ ರಚಿತವಾದ ಕವನ ವಾಚಿಸಿದರು. ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಾಯಿಗೀತಾ ಅಧ್ಯಕ್ಷತೆ ವಹಿಸಿದ್ದರು. ಶ್ರೀಕರ ಶೆಟ್ಟಿ ಉಪಸ್ಥಿತರಿದ್ದರು. ಜಯಲಕ್ಷ್ಮೀ ಆರ್.ಶೆಟ್ಟಿ ವಂದಿಸಿದರು. ಚಿರಶ್ರೀ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net