ಶಿಕ್ಷಣದ ಜತೆಗೆ ತಂತ್ರಜ್ಞಾನ ಕಲಿಕೆ : ಸೋಮನಾಥ್ ಕೆ. ಸಲಹೆ

New Project (45)
Published on

ಬೆಳ್ತಂಗಡಿ: ಶಿಕ್ಷಣದ ಜತೆಗೆ ತಂತ್ರಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳುವುದು ಅತಿಮುಖ್ಯ. ತರಬೇತಿ ಕೇಂದ್ರದಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ವೃತ್ತಿಗೆ ಪೂರಕ ತರಬೇತಿ ಆಯೋಜಿಸಲಾಗುತ್ತಿದೆ. ಇದು ಮುಂದಿನ ಉದ್ಯೋಗಕ್ಕೆ ದಾರಿದೀಪವಾಗಲಿದೆ ಎಂದು ಪ್ರಾಂಶುಪಾಲ ಸೋಮನಾಥ್ ಕೆ. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್‌ನ ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರ ತರಬೇತಿ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಕಚೇರಿ ಪ್ರಬಂಧಕ ಅಣ್ಣು ಗೌಡ ಮಾತನಾಡಿ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಜತೆಗೆ ಅದರ ಭಾಗಗಳ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಮುಖ್ಯ ಎಂದರು.

ಕಂಪ್ಯೂಟರ್ ತರಬೇತಿಯು ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಯೋಜನೆಯಡಿ ನೋಂದಾಯಿತವಾಗಿದ್ದು, ಕೌಶಲ ಯೋಜನೆಯಡಿ ಪ್ರಮಾಣೀಕೃತ ಪ್ರಮಾಣಪತ್ರ ಮತ್ತು ಅಂಕಪಟ್ಟಿ ವಿತರಿಸಲಾಯಿತು. ಒಟ್ಟು 25 ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದುಕೊಂಡರು. ತರಬೇತುದಾರೆ ಜಯಶ್ರೀ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net