ವಿದ್ಯಾನಗರ ಕಾಲೇಜು ಹಳೇ ವಿದ್ಯಾರ್ಥಿ ಸಂಗಮ

New Project (39)
Published on

ಕಾಸರಗೋಡು: ವಿದ್ಯಾನಗರದ ಸರ್ಕಾರಿ ಕಾಲೇಜಿನ 1973ರ ಸಾಲಿನಲ್ಲಿ ಪದವಿ ಪೂರ್ತಿಗೊಳಿಸಿರುವ ವಿದ್ಯಾರ್ಥಿಗಳ ಸಂಗಮ ಭಾನುವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಈ ಬ್ಯಾಚಿನ ವಿದ್ಯಾರ್ಥಿಗಳ ಐದನೇ ವರ್ಷದ ಸಂಗಮ ಇದಾಗಿದ್ದು, ಸಂವಾದ, ಚರ್ಚೆ, ಹಾಡು, ನೃತ್ಯ, ಕವನ ವಾಚನದೊಂದಿಗೆ ಸಂಭ್ರಮಿಸಲಾಯಿತು.

ಎ.ಕರುಣಾಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರಘುನಾಥ್. ಸಿ.ಸಿ., ಅರವಿಂದನ್ ಎನ್.ವಿ., ಮೋಹನನ್ ನಾಯರ್ ಕೆ., ವಿಜಯನ್ ಕೆ., ಮೋಹನನ್ ನಂಬಿಯಾರ್ ಕೆ.ಎನ್., ಎಸ್.ಕೆ.ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net