ಅರೆಭಾಷೆ ಸ್ಪರ್ಧೆಯಲ್ಲಿ ಸಮಗ್ರ ಪುರಸ್ಕಾರ

New Project (46)
Published on

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸ್ಪರ್ಧೆಯಲ್ಲಿ ಅಧಿಕ ಅಂಕ ಪಡೆದು ಸಮಗ್ರ ಪುರಸ್ಕಾರವನ್ನು ಸುಬ್ರಹ್ಮಣ್ಯದ ಎಸ್.ಎಸ್. ಪಿ.ಯು. ಕಾಲೇಜಿನ ಸಾಂಸ್ಕೃತಿಕ ತಂಡ ಪಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ದ್ವಿತೀಯ ಪ್ರಶಸ್ತಿ ಗಳಿಸಿದೆ.

ಸ್ಪರ್ಧಾ ವಿಜೇತರು

ಪ್ರಬಂಧ ಸ್ಪರ್ಧೆ: ಪ್ರಥಮ- ಶ್ರಾವ್ಯಾ, ದ್ವಿತೀಯ- ರೇಶ್ಮಾ, ತೃತೀಯ- ಆಶಿತಾ ಬಿ.ಡಿ., ಅರೆಭಾಷೆ ರೀಲ್ಸ್: ಪ್ರಥಮ- ದಿಗಂತ್ ಮತ್ತು ತಂಡ, ದ್ವಿತೀಯ- ಯುವರಾಜ್ ಮತ್ತು ತಂಡ, ಅರೆಭಾಷೆ ಕಿರು ನಾಟಕ: ಪ್ರಥಮ- ಹವ್ಯಶ್ರೀ ಕೆ.ಎಸ್. ಮತ್ತು ತಂಡ, ದ್ವಿತೀಯ- ಅಂಕಿತ್ ಮತ್ತು ತಂಡ, ತೃತೀಯ ಲೇಖನಾ ಮತ್ತು ತಂಡ, ಅರೆಭಾಷೆ ಹಾಡಿಗೆ ನೃತ್ಯ: ಪ್ರಥಮ- ಬ್ರಾಹ್ಮಿ ಮತ್ತು ತಂಡ, ದ್ವಿತೀಯ ಯಕ್ಷಿತಾ ಡಿ.ಎಲ್. ಮತ್ತು ತಂಡ, ತೃತೀಯ ಶ್ರೇಯಾ ಎ.ಪಿ. ಮತ್ತು ತಂಡ. ಅರೆಭಾಷೆ ಹಾಡು: ಪ್ರಥಮ- ಮೌಲ್ಯಾ, ದ್ವಿತೀಯ- ಯಶಸ್ವಿ, ತತೀಯ- ಅಮೂಲ್ಯ ಬಹುಮಾನ ಪಡೆದರು.

ಬಹುಮಾನ ವಿತರಣೆ

ಕರ್ನಾಟಕ ರಾಜ್ಯ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಚಂದ್ರಶೇಖರ ಪೇರಾಲ್, ಕಾರ್ಯಪ್ಪ ಪಿ.ಎಸ್., ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಲತಾ ಪ್ರಸಾದ್ ಕುತ್ಪಾಜೆ, ಚಂದ್ರಾವತಿ ಬಡ್ಡಡ್ಕ, ಪ್ರಾಚಾರ್ಯ ಸೋಮಶೇಖರ್ ನಾಯಕ್, ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂ ಅಧ್ಯಕ್ಷ ರಾಜೇಶ್ ಎನ್.ಎಸ್., ಲಯನ್ಸ್ ಅಧ್ಯಕ್ಷೆ ವಿಮಲಾ ರಂಗಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಉಪನ್ಯಾಸಕಿಯರಾದ ಸೌವ್ಯಾ ದಿನೇಶ್, ಶ್ರುತಿ ಆಶ್ವತ್ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net