ನಮ್ಮ ಮೆಟ್ರೋ ಪೇಪರ್​ ಟಿಕೆಟ್​ಗೆ ಪೂರಕ ಸ್ಪಂದನೆ

Namma Metro
Published on

ಬೆಂಗಳೂರು: ಲಾಲ್​ಬಾಗ್​ನಲ್ಲಿ ಆಯೋಜನೆಗೊಂಡಿದ್ದ ಲಪುಷ್ಪ ಪ್ರದರ್ಶನಕ್ಕೆ ಗಣರಾಜ್ಯೋತ್ಸವದಂದು ಆಗಮಿಸುವ ಜನರಿಗೆ ಮೆಟ್ರೋದಲ್ಲಿ ಅನುಕೂಲ ಕಲ್ಪಿಸಲು ರಿರ್ಟನ್​ ಜರ್ನಿ ಪೇಪರ್​ ಟಿಕೆಟ್​ ಸೌಲಭ್ಯ ಜಾರಿಗೊಳಿಸಿತ್ತು.

ಜ.26ರಂದು 9,331 ಪೇಪರ್​ ಟಿಕೆಟ್​ಗಳು ಮಾರಾಟವಾಗಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

ಗಣರಾಜ್ಯೋತ್ಸವದಂದು ರಜೆ ಇದ್ದುದರಿಂದ ಲಪುಷ್ಪ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದವರ ಸಂಖ್ಯೆಯೂ ಹೆಚ್ಚಿತ್ತು. ಅಂದು 5.79 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 1.49 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net