

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚರಿಸಲಿರುವ ಚಾಲಕ ರಹಿತ ಮೆಟ್ರೋ ರೈಲನ್ನು ಚೀನಾದಿಂದ ಚೆನ್ನೈ ರಫ್ತು ಮಾಡಲಾಗಿದೆ. ಇದು ಫೆಬ್ರವರಿಯಲ್ಲಿ ಚೆನ್ನೆ$ ಬಂದರಿಗೆ ತಲುಪಲಿದ್ದು, ಬಳಿಕ ರಸ್ತೆ ಮಾರ್ಗವಾಗಿ ಹೆಬ್ಬಗೋಡಿ ಡಿಪೋಗೆ ತಲುಪಲಿದೆ.
ಚೀನಾದಿಂದ ಹಡಗಿನಲ್ಲಿ ರೈಲನ್ನು ಕಳುಹಿಸಿಕೊಟ್ಟಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಅಧಿಕಾರಿಗಳ ತಂಡ ಇತ್ತೀಚೆಗೆ ಚೀನಾಗೆ ತೆರಳಿ, ರೈಲನ್ನು ಪರೀಸಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೈಲನ್ನು ಕಳುಹಿಸಿಕೊಡಲಾಗಿದೆ. ಈ ರೈಲು ಬೆಂಗಳೂರಿಗೆ ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕವಾಗಿ ಚಾಲನೆ ನಡೆಯಲಿದೆ.
ಹೆಬ್ಬಗೋಡಿ ಡಿಪೋದಲ್ಲಿ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನ ಜೋಡಣೆ ಮಾಡಿದ ಬಳಿಕ, ಎಲೆಕ್ಟ್ರಾನಿಕ್ ಸಿಟಿ-ಆರ್ವಿ ರಸ್ತೆಗೆ ಸಂಪರ್ಕ ಕಲ್ಪಿಸುವ 19 ಕಿ.ಮೀ ಉದ್ದದ ಸಂಚರಿಸಲಿವೆ. ಜೂನ್ ಬಳಿಕ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
ಚೀನಾ ಮೂಲದ ಸಂಸ್ಥೆ:
ಚೀನಾ ರೋಲಿಂಗ್ ರೈಲ್ವೇ ಸ್ಟಾಕ್ ಕಾರ್ಪೊರೇಷನ್ ಸಂಸ್ಥೆ ಒಟ್ಟು 216 ಕೋಚ್ಗಳನ್ನು ಪೂರೈಸಲು ಒಪ್ಪಂಡ ಮಾಡಿಕೊಂಡಿದೆ. ಮೂಲ ಮಾದರಿಯ ಎರಡು ರೈಲುಗಳು ಚೀನಾದಲ್ಲಿ ನಿರ್ಮಾಣವಾಗುತ್ತಿವೆ. ಇದರ ಸಹ ಸಂಸ್ಥೆಯಾಗಿರುವ ಕೊಲ್ಕತಾದ ತೀತಾರ್ ರೈಲು ್ಯಾಕ್ಟರಿ ಉಳಿದ ಉಳಿದ ಕೋಚ್ಗಳನ್ನು ನಿರ್ಮಿಸಲಿವೆ.
ಚಾಲಕ ರಹಿತ ರೈಲಿನ ವಿಶೇಷತೆ
ಪ್ರೋಗ್ರಾಮಿಂಗ್ ಆಧಾರದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚರಿಸುತ್ತದೆ. ಕಂಟ್ರೋಲ್ ರೂಮ್ನಲ್ಲಿ ಈ ರೈಲಿನ ಮೇಲೆ ನಿಗಾ ವಹಿಸಲಾಗುತ್ತದೆ. 25 ಕೆವಿ ವಿದ್ಯುತ್ ಸಹಾಯದ ಸಾಮರ್ಥ್ಯದಿಂದ ರೈಲು ಸಂಚರಿಸುತ್ತದೆ. ಅಂದಾಜು ಎರಡು ವರ್ಷಗಳ ಕಾಲ ಹಳದಿ ಮಾರ್ಗದಲ್ಲಿ ಚಾಲಕ ಸಹಿತವಾಗಿ ಈ ರೈಲು ಸಂಚರಿಸುತ್ತವೆ. ಬಳಿಕವಷ್ಟೇ ಚಾಲಕ ರಹಿತವಾಗಿ ಈ ರೈಲುಗಳು ಓಡಾಡಲಿವೆ.