ಬಾರ್ಜ್ ಸೌಲಭ್ಯ ಇಲ್ಲದೆ ಜನಸಾಮಾನ್ಯರಿಗೆ ಸಂಕಷ್ಟ

kota (2)
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಡಿಬೇಂಗ್ರೆ ಹಾಗೂ ಹಂಗಾರಕಟ್ಟೆ ನಡುವಿನ ಹಲವಾರು ವರ್ಷಗಳಿಂದ ಕಲ್ಪಿಸಿದ ಬಾರ್ಜ್ ವ್ಯವಸ್ಥೆ ಕಡಿತಗೊಂಡಿದೆ. ಕೋಡಿ ಹಾಗೂ ಐರೋಡಿ ಗ್ರಾಮ ಪಂಚಾಯಿತಿ ಸಂಪರ್ಕ ಸೇರಿದಂತೆ ಇನ್ನಿತರ ಮೀನುಗಾರಿಕೆಗಾಗಿ ನೂರಾರು ಮಂದಿ ದಿನಂಪ್ರತಿ ಬಾರ್ಜ್ ಮೂಲಕ ಸಂಚರಿಸುತ್ತಿದ್ದು ಇದೀಗ ಕಳೆದ ನಾಲ್ಕು ತಿಂಗಳುಗಳಿಂದ ಬಾರ್ಜ್ ವ್ಯವಸ್ಥೆ ಇಲ್ಲದೆ ಅಸಹಾಯಕ ಸ್ಥಿತಿಗೆ ತಲುಪಿದೆ. ಇದರಿಂದ ಕೋಡಿ ಗ್ರಾಮ ಪಂಚಾಯಿತಿಗೆ ನಿತ್ಯ ಕೆಲಸಕ್ಕೆ ಬೇಂಗ್ರೆಯಿಂದ ಆಗಮಿಸುವ ಜನಸಾವಾನ್ಯರಿಗೆ ಸಮಸ್ಯೆಯಾಗಿದೆ.

ಬಾರ್ಜ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿ ಸಾಕಷ್ಟು ಬಾರಿ ಬಂದರು ಹಾಗೂ ಮೀನುಗಾರಿಕಾ ಇಲಾಖೆಗೆ ಮನವಿ ನೀಡಿದರೂ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರು, ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಯತ್ನಿಸಿದರೂ ಪ್ರಯೋಜನ ಶೂನ್ಯವಾಗಿದೆ. ಬಾರ್ಜ್ ವ್ಯವಸ್ಥೆ ಶ್ರೀ ಆರಂಭಿಸಬೇಕು ಇಲ್ಲವಾದಲ್ಲಿ ಎರಡು ಭಾಗದ ಫಲಾನುಭವಿಗಳು ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

ಕಾರವಾರದ ಹೊಸ ಬಾರ್ಜ್ ವ್ಯವಸ್ಥೆ ಸಿದ್ಧತೆಗೆ ಮಾತ್ರ

ಪ್ರಸ್ತುತ ಕೋಡಿ ಮತ್ತು ಹಂಗಾರಕಟ್ಟೆ ನಡುವೆ ಸಂಪರ್ಕಕ್ಕೆ ಸಂಬಂಧಿಸಿದ ಬಾರ್ಜ್ ವ್ಯವಸ್ಥೆ ಸರ್ಕಾರ ಮಟ್ಟದ ಇಲಾಖೆ ಕಾರವಾರದ ಮಿನಿ ಬಾರ್ಜ್ ಸಿದ್ಧಗೊಳಿಸಿದ್ದು, ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಎಂಬ ನೆಪದಲ್ಲಿ ತಿಂಗಳುಗಟ್ಟಲೆ ಕಾರವಾರದಲ್ಲೇ ಇರಿಸಿ ಮೀನಮೇಷ ಎಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ರಿಪೇರಿಗೆ ಹಣವಿಲ್ಲ ಎಂಬ ನೆಪ

ಈವರೆಗೆ ಕಾರ್ಯನಿರ್ವಹಿಸುತ್ತಿದ್ದ ಬಾರ್ಜ್ ಕೆಟ್ಟು ಮೂಲೆ ಸೇರಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ಸಂಪರ್ಕಿಸಿದರೆ ಇಲಾಖೆಯಲ್ಲಿ ರಿಪೇರಿಗಾಗಿ ಹಣವಿಲ್ಲ ಎಂಬ ವಾತುಗಳು ಕೇಳಿಬಂದಿವೆ. ಹಾಗಾದರೆ ಜನಸಾವಾನ್ಯರ ಬವಣೆ ಆಲಿಸಬೇಕಾದ ಸರ್ಕಾರದ ಇಲಾಖೆಗಳು ಈ ರೀತಿಯಲ್ಲಿ ಕೈಚೆಲ್ಲಿ ಕೂರಿದ್ದು ಶೋಚನೀಯ.

ಹಂಗಾರಕಟ್ಟೆ ಮತ್ತು ಕೋಡಿ ಬೇಂಗ್ರೆ ಸಾರಿಗೆ ಕಲ್ಪಿಸುವ ವ್ಯವಸ್ಥೆಗೆ ಕಾರವಾರದಲ್ಲಿ ಇರಿಸಲಾದ ಹೊಸ ಬಾರ್ಜ್ ಸಹಕಾರಿಯಾಗಲಿದೆ. ಆದರೆ ಈ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಸಂವಹನ ನಡೆಸಿದ್ದು ಸಮುದ್ರದಲ್ಲಿ ತುಫಾನ್ ಸೆಳೆತದಿಂದ ವಿಳಂಬವಾಗುತ್ತಿದೆ ಎಂಬ ವಾಹಿತಿ ನೀಡಿದ್ದು ಶ್ರೀದಲ್ಲಿ ಹಂಗಾರಕಟ್ಟೆ ಬಂದರಿಗೆ ಸ್ಥಳಾಂತರಿಸಲು ಭರವಸೆ ನೀಡಿದ್ದಾರೆ. ಕಿರಣ್‌ಕುವಾರ್ ಕೊಡ್ಗಿ, ಕುಂದಾಪುರ ಶಾಸಕ ಕೋಡಿ ಬೇಂಗ್ರೆಯಿಂದ ಹಂಗಾರಕಟ್ಟೆ ಮೂಲಕ ಕೋಡಿ ಗ್ರಾಮ ಪಂಚಾಯಿತಿ ತಲುಪಬೇಕಾದ ನಮಗೆ ಬಾರ್ಜ್ ಸೌಲಭ್ಯದಿಂದ ವಂಚಿತಗೊಳಿಸಲಾಗಿದೆ. ಈ ಬಗ್ಗೆ ಇಲಾಖೆ ನಿರ್ಲಕ್ಷ್ಯ ತೊರುತ್ತಿದೆ ಇನ್ನು ಒಂದು ವಾರದಲ್ಲಿ ಬಾರ್ಜ್ ವ್ಯವಸ್ಥೆ ಕಲ್ಪಿಸದಿದ್ದರೆ ಬೃಹತ್ ಹೋರಾಟ ನಡೆಸಬೇಕಾಗುತ್ತದೆ. ಪ್ರಸಾದ್ ತಿಂಗಳಾಯ, ಕೋಡಿ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net