ಭಾರತದ ನೈಜ, ಶ್ರೇಷ್ಠ ಸಂಪತ್ತು ಆರ್​ಎಸ್​ಎಸ್​

Putthige Shree
Published on

ಪರ್ಯಾಯ ಸುಗುಣೇಂದ್ರ ಶ್ರೀ ಅಭಿಮತ

ಶತಮಾನೋತ್ಸವಕ್ಕೆ ಶುಭ ಹಾರೈಕೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದ ಹೆಮ್ಮೆಯಾದ ಹಾಗೂ ಜಗತ್ತಿನಲ್ಲೇ ಗಣ್ಯವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ಕ್ಕೆ ಶತಮಾನೋತ್ಸವದ ಸಂಭ್ರಮ ಎನ್ನುವುದು ನಮಗೆ ಸಂತಸ ತಂದಿದೆ. ತ್ಯಾಗದ ಆಧಾರದ ಸ್ವಯಂ ಸೇವೆಯ ಭಾವ ಹೊಂದಿರುವ ಆರ್​ಎಸ್​ಎಸ್​ನ ಮೂಲ ಚಿಂತನೆಯೇ ಶ್ಲಾಘನೀಯ. ಇದು ಭಾರತದ ನೈಜ, ಶ್ರೇಷ್ಠ ಸಂಪತ್ತು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ವ್ಯಕ್ತಿಗೆ 100 ವರ್ಷವಾದರೆ ದುರ್ಬಲನಾಗುತ್ತಿದ್ದಾನೆ ಎಂದರ್ಥ. ಆದರೆ, ಒಂದು ಸಂಸ್ಥೆಗೆ 100 ವರ್ಷವಾಗಿದೆಯೆಂದರೆ ಅದು ಇನ್ನಷ್ಟು ಬಲವಾಗಿ ಬೆಳೆಯುತ್ತಿದೆ ಎಂದರ್ಥ. ಈ ನಿಟ್ಟಿನಲ್ಲಿ ಆರ್​ಎಸ್​ಎಸ್​ ಸದೃಢ ಸಂಘಟನೆ. ಯಾವ ಸಂಘದಲ್ಲಿ ತ್ಯಾಗ ಮತ್ತು ಸೇವೆಗೆ ಆದ್ಯತೆ ಇರುತ್ತದೆಯೋ ಅದು ಇನ್ನಷ್ಟು ಸದೃಢವಾಗುತ್ತದೆ ಎಂದು ತಿಳಿಸಿದ್ದಾರೆ.

ದೇಶಕ್ಕಾಗಿ ಆರ್​ಎಸ್​ಎಸ್​ ಅತ್ಯಂತ ಪ್ರಾಮಾಣಿಕ ಸೇವೆ ಮಾಡುತ್ತಿದೆ. ದೇಶದ ರಕ್ಷಣೆಯಲ್ಲಿ ಸಂಘದ ಪಾತ್ರವೂ ಸಹ ಮುಖ್ಯವಾಗಿದೆ. ವಿಶ್ವದಲ್ಲಿ ಸನಾತನ ಧರ್ಮದ ಮಹತ್ವ, ಗೌರವ ಹೆಚ್ಚಿಸುವಲ್ಲಿಯೂ ಕಾರಣವಾಗಿದೆ. ಈ ಸಂಘ ಇನ್ನಷ್ಟು ಬಲವಾಗಬೇಕು, ಶಾಶ್ವತವಾಗಬೇಕು, ಅಜರಾಮರವಾಗಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ತಿಳಿಸಿದಂತೆ ಯಾವುದೇ ಫಲಾಪೇಕ್ಷೆ ಇಲ್ಲದೆ ಜನರಿಗೆ ಆಪತ್ಕಾಲ ಉಂಟಾದಾಗ ಸ್ವಯಂ ಬಂದು ನಿಶ್ಯಬ್ದವಾಗಿ, ಪ್ರಚಾರ ಬಯಸದೇ ಸೇವೆಯಲ್ಲಿ ತೊಡಗುತ್ತದೆ. ಇಂತಹ ಇನ್ನೊಂದು ಸಂಘ ಜಗದಲ್ಲಿಲ್ಲ. ಭಗವದ್ಗೀತೆಯ ಸಾರದಂತೆ ನಡೆಯುತ್ತಿರುವ ಸಂಘಕ್ಕೆ ಶ್ರೀಕೃಷ್ಣನ ಸಂಪೂರ್ಣ ಆಶೀರ್ವಾದ ಲಭಿಸಲಿ ಎಂದು ಹಾರೈಸುತ್ತೇವೆ ಎಂದು ಸುಗುಣೇಂದ್ರ ಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net