ಡಾ.ಕಯ್ಯರ ಕಿಞ್ಞಣ್ಣ ರೈ ಸಂಸ್ಮರಣೆ

bem
ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಅವರ ಸಂಸ್ಮರಣೆ ಹಾಗೂ ಕವಿತಾ ಕಮ್ಮಟ ಕಾರ್ಯಕ್ರಮ ನಡೆಯಿತು. ರಕ್ಷಿತಾ, ಶಾಲಾ ಶಿಕ್ಷಕರಾದ ಮುರಳಿ ಮಾಧವ ಹಾಗೂ ಯಶವಂತ ವೈ ಉಪಸ್ಥಿತರಿದ್ದರು.
Published on

ಕಾಸರಗೋಡು: ಹಿರಿಯ ಸಾಹಿತಿ, ನಾಡೋಜ ಡಾ.ಕಯ್ಯರ ಕಿಞ್ಞಣ್ಣ ರೈ ಸಂಸ್ಮರಣೆ ಹಾಗೂ ಕವಿತಾ ಕಮ್ಮಟ ನಗರದ ಬಿಇಎಂ ಪ್ರೌಢಶಾಲೆಯಲ್ಲಿ ಜರುಗಿತು.

ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಶಿಕ್ಷಕ ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ದಿವ್ಯಾಗಟ್ಟಿ ಪರಕ್ಕಿಲ ಸಮಾರಂಭ ಉದ್ಘಾಟಿಸಿ, ಕವಿ ಕಯ್ಯರ ಕಿಞಣ್ಣ ರೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕವಿ ಕಯ್ಯರ ಕಿಞ್ಞಣ್ಣ ರೈ ಅವರ ಭಾವಚಿತ್ರ ರಚನೆ ಹಾಗೂ ಅವರ ಭಾವಗೀತೆ ಹಾಡುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ರಕ್ಷಿತಾ, ಶಾಲಾ ಶಿಕ್ಷಕರಾದ ಮುರಳಿ ಮಾಧವ ಹಾಗೂ ಯಶವಂತ ವೈ ಉಪಸ್ಥಿತರಿದ್ದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕಿ ಸೌಮ್ಯ ಮಯ್ಯ ಸ್ವಾಗತಿಸಿದರು. ಶಿಕ್ಷಕಿ ರೋಹಿತಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ ಮಾನಸ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net