

ಕಾಸರಗೋಡು: ಸಂಶಯಾಸ್ಪದ ರೀತಿಯಲ್ಲಿ ಕುಂಬಳೆಯ ಸಿಎಚ್ಸಿ ರಸ್ತೆಯಲ್ಲಿ ಠಳಾಯಿಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶನಿವಾರ ನಸುಕಿಗೆ ಪೊಲೀಸರು ಪೆಟ್ರೋಲಿಂಗ್ ನಿರತರಾಗಿರುವ ಮಧ್ಯೆ ಮೂರು ಮಂದಿ ಸಂಶಯಕರವಾಗಿ ಸುತ್ತಾಡುತ್ತಿರುವುದನ್ನು ಮನಗಂಡು ಸೆರೆಹಿಡಿದಿದ್ದಾರೆ.
ಪೆರಿಯಡ್ಕ ನಿವಾಸಿ ಅನ್ಸಾರ್, ಮಧೂರು ಕೆ.ಕೆ ಪುರಂ ನಿವಾಸಿ ಉಸ್ಮಾನ್, ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಅಶ್ರಫ್ ಸೆರೆಗೀಡಾದವರು. ಇವರಲ್ಲಿ ಅನ್ಸಾರ್ ಹತ್ಯಾಯತ್ನ, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಕಲಿ ಚಿನ್ನ ಇರಿಸಿ ಹಣ ಪಡೆದಿರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.