ಆತೂರು ಶ್ರೀ ಸದಾಶಿವ ದೇವಸ್ಥಾನ

naga
ಕಡಬ ತಾಲೂಕು ಕೊಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ ಉತ್ಸವ ನಡೆಯಿತು.
Published on

ಕಡಬ: ತಾಲೂಕಿನ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಶ್ರೀ ನಾಗದೇವರಿಗೆ ಸೀಯಾಳ, ಕ್ಷೀರ ಅಭಿಷೇಕ ನಡೆಯಿತು.

ದೇವಳದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ಸದಸ್ಯರಾದ ಸಂಜೀವ ಗೌಡ ವಳಡಮ, ವಿನಯ ರೈ ಕೊಲ ಪಟ್ಟೆ, ಉತ್ಸವ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪದಾಧಿಕಾರಿಗಳಾದ ಧರ್ನಪ್ಪ ಗೌಡ ಕೊರಿಕ್ಕಾರು, ಭವಾನಿಶಂಕರ ಪರಂಗಾಜೆ, ಚಂದ್ರಹಾಸ ರೈ ಬುಡಲೂರು, ದೇವಳದ ಕಾರ್ಯದರ್ಶಿ ಆಶೋಕ ಪಲ್ಲಡ್ಕ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net