

ಕಾಸರಗೋಡು: ಉಪ್ಪಳ ಪತ್ವಾಡಿ ರಸ್ತೆಯಲ್ಲಿ ಕಾರ್ಯಾಚರಿಸುವ ಹೈಪರ್ ಮಾರ್ಕೆಟ್ನಲ್ಲಿ ಬೆಂಕಿ ಆಕಸ್ಮಿಕದಿಂದ ವಿವಿಧ ಸಾಮಗ್ರಿ, ಫ್ರಿಡ್ಜ್, ಎಸಿ ಹಾನಿಗೀಡಾಗಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ನೀಡಿದ ಮಾಹಿತಿಯನ್ವಯ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಶಮನಗೊಳಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.