

ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿದ್ದರಿಂದ ಸುಮಾರು ಅರ್ಧ ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಾರಿಯುದ್ದಕ್ಕೂ ನಿಂತಿದ್ದ ವಾಹನಗಳು ಕೊನೆಗೆ ಹಾವು ರಸ್ತೆ ಬಿಟ್ಟು ಹೋದ ಬಳಿಕವೇ ಮುಂದಕ್ಕೆ ಸಾಗಿವೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಬಳಿ ಇಂಥದ್ದೊಂದು ಅಪರೂಪದ ಪ್ರಕರಣ ವರದಿಯಾಗಿದೆ. ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ನಾಗರಹಾವು ಕಾಣಿಸಿಕೊಂಡಿತ್ತು.
ಹೆಚ್ಚೂಕಡಿಮೆ ಅರ್ಧ ಗಂಟೆ ಕಾಲ ಈ ನಾಗರಹಾವು ರಸ್ತೆ ಮೇಲೆಯೇ ಇದ್ದಿದ್ದರಿಂದ ವಾಹನ ಸವಾರರೂ ವಾಹನಗಳನ್ನು ನಿಲ್ಲಿಸಿ ಕಾಯಬೇಕಾಯಿತು. ಇದರಿಂದ ಒಂದಷ್ಟು ಕಾಲ ರಸ್ತೆ ತಡೆ ಉಂಟಾಗಿದ್ದಲ್ಲದೆ ವಾಹನದಟ್ಟಣೆ ಕೂಡ ಕಂಡುಬಂತು.