ಅಪಾಯಕಾರಿ ಬೃಹದಾಕಾರದ ಹೆಬ್ಬಲಸಿನ ಮರ ತೆರವು

gaint tree
ಕಾಪು ತಾಲೂಕು ಆಡಳಿತ ಸೌಧದ ಆವರಣದಲ್ಲಿದ್ದ ಅಪಾಯಕಾರಿ ಮರವನ್ನು ತಹಸೀಲ್ದಾರ್ ಪ್ರತಿಭಾ ಉಪಸ್ಥಿತಿಯಲ್ಲಿ ಅರಣ್ಯ ಇಲಾಖೆ ತೆರವುಗೊಳಿಸಿತು
Published on

ಪಡುಬಿದ್ರಿ: ಕಾಪು ತಾಲೂಕು ಆಡಳಿತ ಸೌಧದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬೃಹದಾಕಾರದ ಹೆಬ್ಬಲಸಿನ ಮರವನ್ನು ಅರಣ್ಯ ಇಲಾಖೆ ಭಾನುವಾರ ತೆರವು ಮಾಡಿದೆ.

ಹಲವು ವರ್ಷಗಳಿಂದ ಇದನ್ನು ತೆರವು ಮಾಡಲು ಪ್ರಯತ್ನ ನಡೆದಿದ್ದು, ಇದೀಗ ತಹಸೀಲ್ದಾರ್ ಪ್ರತಿಭಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಮುಖ್ಯಾಧಿಕಾರಿ ನಾಗರಾಜ್‌ರವರ ಪ್ರಯತ್ನದಿಂದ ಮರ ತೆರವು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಮಂಜುನಾಥ್ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್ ಅವರ ತಂಡ ಮರ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net