

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಸಹಸ್ರಲಿಂಗೆಶ್ವರ ದೇವಾಲಯದ ಸ್ವಚ್ಛತಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ದೇವಳ ಪರಿಸರದಲ್ಲಿ ಜೂನ್ 7ರಂದು ಸಂಕಲ್ಪಿಸಲಾದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯ ಪೂರ್ವಭಾವಿಯಾಗಿ ದೇವಾಲಯ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ಸದಸ್ಯರಾದ ಶ್ರೀರಾಮ ಭಟ್ ಪಾತಾಳ, ಲೋಕೇಶ್ ಬೆತ್ತೋಡಿ, ಕೈಲಾರ್ ರಾಜಗೋಪಾಲ ಭಟ್, ಹೇರಂಭ ಶಾಸ್ತ್ರಿ, ಚಿದಾನಂದ ಪಂಚೇರು, ಮಹೇಂದ್ರ ವರ್ಮ, ಸಂದೀಪ್ ಮೊದಲಾದವರಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯರಾದ ವೆಂಕಪ್ಪ ಪೂಜಾರಿ, ರಮ್ಯಾ ರಾಜಾರಾಮ್, ಕಾರ್ಯನಿರ್ವಹಣಾಧಿಕಾರಿ ಚೆನ್ನಪ ಗೌಡ ಸ್ವಯಂಸೇವಕರನ್ನು ಸ್ವಾಗತಿಸಿದರು. ದೇವಳದ ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ ಗೌಡ, ಸುಧಾಕರ ಶೆಟ್ಟಿ ಸಹಕರಿಸಿದರು.