ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಕೇಸ್​: ಇಬ್ಬರ ಮೇಲೆ ತಂದೆಯ ಅನುಮಾನ..!

CID DYSP
Published on

ಬೆಂಗಳೂರು: ಆತ್ಮಹತ್ಯೆಗೆ ಶರಾಣದ ಡಿವೈಎಸ್ಪಿ ಲಕ್ಷ್ಮೀ ಅವರು ಕೋಲಾರ ಮೂಲದವರಾಗಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿಮ ತುರುವಾಲಟ್ಟಿ ಗ್ರಾಮದವರು. ತಂದೆ ವೆಂಕಟೇಶಪ್ಪ ಡಿಸಿಸಿ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿದ್ದು, ಮಗಳ ಸಾವು ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ಲಕ್ಷ್ಮೀ ಕಳೆದ ಎಂಟು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಪೋಷಕರಿಂದ ದೂರ ಇದ್ದರು ಎನ್ನಲಾಗಿದೆ. ಅಲ್ಲದೆ ಸದ್ಯ ಪೋಷಕರಿಂದ ದೂರವಿದ್ದ ಲಕ್ಷ್ಮೀ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇನ್ನು ಮದ್ಯಾಹ್ನ 3 ಗಂಟೆ ಸುಮಾರಿಗೆ ಸ್ವಗ್ರಾಮ ತುರುವಾಲಟ್ಟಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಲಕ್ಷ್ಮೀ ಕುಟುಂಬ ಸದಸ್ಯರಿಂದ ಮಾಹಿತಿ ಸಿಕ್ಕಿದೆ.

ನನಗೆ ಇಬ್ಬರ ಮೇಲೆ ಅನುಮಾನ ಇದೆ. ನಿನ್ನೆ ನನ್ನ ಮಗಳು ಮನು ಹಾಗೂ ಪ್ರಜ್ವಲ್ ಎಂಬುವರ ಜೊತೆ ಪಾರ್ಟಿ ಮಾಡಿದ್ಳು. ಒಟ್ಟು ಆರು ಜನ ಸೇರಿ ನಿನ್ನೆ ಪಾರ್ಟಿ ಮಾಡಿದ್ರು. ಅವರಿಬ್ಬರು ಹೇಳಿದಂತೆ ಶಾಲ್ ತೆಗೆದುಕೊಂಡು ರೂಮ್ ಒಳಗೆ ಹೋಗಿ ಲಕ್ಷ್ಮಿ ಬಾಗಿಲು ಮುಚ್ಚಿದಳಂತೆ. ಆ ಬಳಿಕ ತುಂಬಾ ಹೊತ್ತು ಏನೂ ಸದ್ದು ಗದ್ದಲ‌ ಇರಲಿಲ್ಲವಂತೆ. ಆಮೇಲೆ ನೋಡಿದರೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ಳು ಅಂತಿದ್ದಾರೆ. ಆದ್ರೆ ಅವರಿಬ್ಬರು ಹೇಳುವುದು ಸುಳ್ಳು ಅಂತನ್ನಿಸ್ತಿದೆ. ನಂಗೆ ಅವರಿಬ್ಬರ ಮೇಲೆ ಅನುಮಾನ ಇದೆ. ಅದನ್ನು ಪೊಲೀಸರಿಗೂ ಹೇಳಿದ್ದೇನೆ ಎಂದು ಲಕ್ಷ್ಮೀ ತಂದೆ ವೆಂಕಟೇಶಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net