ಮತದಾನದ ಹಕ್ಕು ಕಿತ್ತುಕೊಳ್ಳುವ ಹುನ್ನಾರ

 ಚಳ್ಳಕೆರೆಯಲ್ಲಿ ಬುಧವಾರ ಎಸ್‌ಐಆರ್ ಕೈಬಿಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದರು. ಟಿ. ತಿಪ್ಪೇಸ್ವಾಮಿ, ಟಿ. ನಿಂಗಣ್ಣ, ಎಚ್.ಒ. ನಾಗರಾಜ್, ಎಸ್. ರಾಜಣ್ಣ ಇದ್ದರು.
ಚಳ್ಳಕೆರೆಯಲ್ಲಿ ಬುಧವಾರ ಎಸ್‌ಐಆರ್ ಕೈಬಿಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದರು. ಟಿ. ತಿಪ್ಪೇಸ್ವಾಮಿ, ಟಿ. ನಿಂಗಣ್ಣ, ಎಚ್.ಒ. ನಾಗರಾಜ್, ಎಸ್. ರಾಜಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಕೈಬಿಡಲು ಆಗ್ರಹ
  • ಚಳ್ಳಕೆರೆಯಲ್ಲಿ ಸಿಪಿಐ ಪ್ರತಿಭಟನೆ
  • ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಕೆ
ಚಳ್ಳಕೆರೆ:ಎಸ್‌ಐಆರ್ ನೆಪದಲ್ಲಿ ಸಂವಿಧಾನ ಬದ್ಧ ಮತದಾನದ ಹಕ್ಕು ಕಿತ್ತುಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಬುಧವಾರ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಆವರಣದ ಶ್ರಮಿಕರ ಭವನದಿಂದ ಹೊರಟ ಪ್ರತಿಭಟನಕಾರರು, ನೆಹರು ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆ ಕಾರ್ಯದರ್ಶಿ ಟಿ. ತಿಪ್ಪೇಸ್ವಾಮಿ ಮಾತನಾಡಿ, ಜನತಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸಲು ಅಧಿಕಾರ ಇಲ್ಲ. ಮತಪಟ್ಟಿಯನ್ನು ಸಾಮಾನ್ಯ ಪರಿಷ್ಕರಣೆ ಮಾಡಲು ಮಾತ್ರ ಅವಕಾಶ ಇದೆ. ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ನಿವೃತ್ತ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ 25ವರ್ಷಕ್ಕೊಮ್ಮೆ ಮತದಾರ ಪಟ್ಟಿ ಪರಿಷ್ಕರಣೆ ನಡೆಸುವ ಪದ್ಧತಿ ಇತ್ತು. ಆದರೆ, ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ನ ಮಾರ್ಗದರ್ಶನದಂತೆ ಎಸ್‌ಐಆರ್ ನಡೆಸಲು ಮುಂದಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಧಕ್ಕೆ ಬರಲಿದೆ. ಕೂಡಲೇ ಎಸ್‌ಐಆರ್ ಕೈಬಿಡಬೇಕು. ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಪತದಾರರ ಪಟ್ಟಿಯಿಂದ ತೆಗೆಯಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ನಗರದ ಕೆಲ ವಾರ್ಡ್‌ಗಳ ಕಾಯಂ ನಿವಾಸಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದ ನಿಜವಾದ ಮತದಾರರಿಗೆ ಅನ್ಯಾಯವಾಗಲಿದೆ. ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಮತ್ತು ಕೋಮುವಾದಿ ಸಿದ್ದಾಂತ ಬೆಳೆಸುತ್ತಿದೆ. ಆರಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬ ಮತ್ತು ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹವಾದ ಕುಟುಂಬಗಳಿಗೆ ಸಮಸ್ಯೆ ಮಾಡುವ ಉದ್ದೇಶದಿಂದ ಎಸ್‌ಐಆರ್ ಜಾರಿ ಮಾಡಲಾಗಿದೆ ಎಂದು ಆರೋಪಿಸಿದರು.
ಸಂಘಟನೆಯ ಟಿ. ನಿಂಗಣ್ಣ, ಎಚ್.ಒ. ನಾಗರಾಜ್, ಎಸ್. ಚನ್ನಕೇಶವ ಮೂರ್ತಿ, ಈ. ನಾಗರಾಜ್, ಬೋರಯ್ಯ, ಕೆ.ಬಿ. ಜಯಣ್ಣ, ತಿಮ್ಮರಾಜ್, ಕೆ. ಪ್ರಭು, ಪಿ. ನಾಗೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net