ಈ ವರ್ಷದ 67,199 ಸಾವಿರ ಹೆಕ್ಟೇರ್ ಬಿತ್ತನೆ ಶೇಂಗಾ ಭೂಮಿಗೆ ಅನುಗುಣವಾಗಿ ನಿರೀಕ್ಷಿತ 14 ಸಾವಿರ ಕ್ವಿಂಟಾಲ್ ದಾಸ್ತಾನು ವ್ಯವಸ್ಥೆಗೆ ಈಗಾಗಲೇ 1960 ಕ್ವಿಂಟಾಲ್ ಸಂಗ್ರಹ ಮಾಡಿಕೊಳ್ಳಲಾಗಿತ್ತು. ತಾಲೂಕಿನ ಸುಮಾರು 30 ಸಾವಿರ ರೈತರಿಗೆ ಸಮರ್ಪಕವಾಗಿ ಶೇಂಗಾ ವಿತರಣೆ ದೃಷ್ಟಿಯಿಂದ ನಗರದ ಎಪಿಎಂಸಿ ಮಾರುಕಟ್ಟೆ ಮಳಿಗೆಯಲ್ಲಿ 330 ಕ್ವಿಂಟಾಲ್, ತಳಕು ಹೋಬಳಿ ಕೃಷಿ ಉಪ ಕೇಂದ್ರದಲ್ಲಿ 180, ಪರಶುರಾಮಪುರ ಹೋಬಳಿ ಕೃಷಿ ಉಪ ಕೇಂದ್ರದಲ್ಲಿ 170, ನಾಯಕನಹಟ್ಟಿ ಹೋಬಳಿ ಕೃಷಿ ಉಪ ಕೇಂದ್ರದಲ್ಲಿ 150 ಕ್ವಿಂಟಾಲ್ ಶೇಂಗಾ ದಾಸ್ತಾನು ಮಾಡಿಕೊಂಡಿದ್ದ ಕೃಷಿ ಇಲಾಖೆಯ ಕಾರ್ಯಕ್ಕೂ ಹಿನ್ನಡೆ ಆಗುವ ರೀತಿಯಲ್ಲಿ ಶೇಂಗಾ ಖರೀದಿಗೆ ರೈತರು ಮುಂದೆ ಬರುತ್ತಿಲ್ಲ.