ಕಲುವಳ್ಳಿ ಭಾಗದಲ್ಲಿ ಮತ್ತೆ ಹೋರಾಟದ ಸದ್ದು movement

ಹಿರಿಯೂರು ತಾಲೂಕಿನ ಕಲುವಳ್ಳಿ ಭಾಗದ ನೀರಿನ ಸಮಸ್ಯೆ ಕುರಿತಂತೆ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ‌್ಯಾಲಿ ಕುರಿತು ದಿಂಡಾವರ ಗ್ರಾಮದಲ್ಲಿ ಜನ ಜಾಗೃತಿ ಮೂಡಿಸಲಾಯಿತು. ರೈತ ಮುಖಂಡ ಜಯಪ್ರಕಾಶ್, ಚಂದ್ರಗಿರಿ, ವಿರೂಪಾಕ್ಷ, ರಾಜು, ಶ್ರೀನಿವಾಸ್, ರಂಗಪ್ಪ ಇತರರಿದ್ದರು. movement
ಹಿರಿಯೂರು ತಾಲೂಕಿನ ಕಲುವಳ್ಳಿ ಭಾಗದ ನೀರಿನ ಸಮಸ್ಯೆ ಕುರಿತಂತೆ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ‌್ಯಾಲಿ ಕುರಿತು ದಿಂಡಾವರ ಗ್ರಾಮದಲ್ಲಿ ಜನ ಜಾಗೃತಿ ಮೂಡಿಸಲಾಯಿತು. ರೈತ ಮುಖಂಡ ಜಯಪ್ರಕಾಶ್, ಚಂದ್ರಗಿರಿ, ವಿರೂಪಾಕ್ಷ, ರಾಜು, ಶ್ರೀನಿವಾಸ್, ರಂಗಪ್ಪ ಇತರರಿದ್ದರು. movement
Published on

ಪ್ರಮುಖ ಮುಖ್ಯಾಂಶಗಳು

  • 6 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ಹಾಹಾಕಾರ
  • ನೀರಾವರಿ ಯೋಜನೆ ವಿಳಂಬಕ್ಕೆ ಆಕ್ರೋಶ
  • ಸರ್ಕಾರದ ವಿರುದ್ಧ ಹೋರಾಟದ ಕಹಳೆ
ಹಿರಿಯೂರು: ತಾಲೂಕಿನ ಜೆಜಿ ಹಳ್ಳಿ ಹೋಬಳಿ ವ್ಯಾಪ್ತಿಯ ಕಲುವಳ್ಳಿ ಭಾಗದಲ್ಲಿ ವರುಣನ ಅವಕೃಪೆಯಿಂದ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದಲ್ಲಿ ಮತ್ತೊಂದು ಬೃಹತ್ ರೈತ ಚಳವಳಿ ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. movement
ತಾಲೂಕಿನಲ್ಲಿ ಎರಡು ಜಲಾಶಯ ಇದ್ದರೂ, ಇಲ್ಲಿನ ರೈತರ ಪರಿಸ್ಥಿತಿ ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ. ಜೆ.ಜಿ. ಹಳ್ಳಿ ಹೋಬಳಿ ಬರಪೀಡಿತ ಪ್ರದೇಶವಾಗಿದೆ. ಕಳೆದೊಂದು ದಶಕದಿಂದ ಸಕಾಲಕ್ಕೆ ಮಳೆ ಇಲ್ಲದೆ ಅಂತರ್ಜಲ ಬತ್ತಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಕಲುವಳ್ಳಿ ಭಾಗದ 6 ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ದಿಂಡಾವರ, ಕರಿಯಾಲ, ಗೌಡನಹಳ್ಳಿ, ಯಲ್ಲದಕೆರೆ, ಉಡುವಳ್ಳಿಯಲ್ಲಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಕೆಲವೆಡೆ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಾವರಿ ಯೋಜನೆ ಅನುಷ್ಠಾನ ವಿಳಂಬದ ಹಿನ್ನೆಲೆಯಲ್ಲಿ ರೈತರು ಸರ್ಕಾರದ ವಿರುದ್ಧ ಹೋರಾಟದ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.
ಅಂತರ್ಜಲ ಪಾತಾಳ ಸೇರಿದ್ದು, ರೈತರು ಅಡಿಕೆ, ತೆಂಗು ಇತರೆ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ತಾಲೂಕನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಸಮಗ್ರ ನೀರಾವರಿ ಯೋಜನೆ ಕನಸು ಇಲ್ಲಿಯವರೆಗೆ ಸಾಕಾರವಾಗಿಲ್ಲ.
ಕಲುವಳ್ಳಿ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸಲು 265 ಕೋಟಿ ರೂ. ವೆಚ್ಚದ ಯೋಜನೆ ಸರ್ವೆ ಪೂರ್ಣಗೊಂಡಿದೆ. ತಕ್ಷಣ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕು. ಒಂದು ತಿಂಗಳಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಕ್ರಮವಹಿಸಬೇಕು. ವಿಳಂಬ ಧೋರಣೆ ಅನುಸರಿಸಿದರೆ ಜಿಲ್ಲಾಧಿಕಾರಿ ಕಚೇರಿ ಬಳಿ ನಿರಶನ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ. ಚಂದ್ರಗಿರಿ, ವಿರೂಪಾಕ್ಷ, ರಾಜು, ಶ್ರೀನಿವಾಸ್, ರಂಗಪ್ಪ ಇತರರಿದ್ದರು.

ಹಿರಿಯೂರು ತಾಲೂಕಿನ ಕಲುವಳ್ಳಿ ಭಾಗದಲ್ಲಿ ವರುಣನ ಅವಕೃಪೆ, ಅಂತರ್ಜಲ ಕುಸಿತದಿಂದ ಜನ-ಜಾನುವಾರು ಹನಿ ನೀರಿಗೂ ಪರಿತಪಿಸುವಂತಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆ ಜಪ ಬಿಟ್ಟು ಜಲ ಸಂಕಷ್ಟ ಪರಿಹಾರಕ್ಕೆ ಸ್ಪಂದಿಸಬೇಕು.

— -ಜಯಪ್ರಕಾಶ್, ರೈತ ಮುಖಂಡ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net