ಕರೊನಾಗೆ ಹೆದರಿ ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು..!

Superstition
Published on

ಚಿತ್ರದುರ್ಗ: ಮಹಾಮಾರಿ ಕರೊನಾಗೆ ಹೆದರಿರುವ ಗ್ರಾಮಸ್ಥರು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ಮನ್ನೇಕೋಟೆ ಗ್ರಾಮದಲ್ಲಿ ನಡೆದಿದೆ.

ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮ ಮನ್ನೇಕೋಟೆಯಲ್ಲಿ ಕೇವಲ 25 ದಿನಗಳ ಅಂತರದಲ್ಲಿ 15 ಜನರ ಸರಣಿ ಸಾವಾಗಿದೆ. ಅಲ್ಲದೆ, 450ಕ್ಕೂ ಹೆಚ್ಚು ಜನರಿಗೆ ಶೀತ, ಕೆಮ್ಮು, ನಗಡಿ, ಜ್ವರ ಕಾಣಿಸಿಕೊಂಡಿದೆ.

ಮೃತ 15 ಮಂದಿಯಲ್ಲಿ 5 ಜನರು ಕೋವಿಡ್​ಗೆ ಬಲಿಯಾಗಿದ್ದರೆ, ಉಳಿದ 10 ಮಂದಿ ಇನ್ನಿತರ ರೋಗಗಳಿಗೆ ತುತ್ತಾಗಿದ್ದಾರೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಆರೋಗ್ಯ ಇಲಾಖೆಯ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸೌಜನ್ಯಕ್ಕೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಮೂಢನಂಬಿಕೆಗೆ ಮೊರೆಹೋಗಿರುವ ಗ್ರಾಮಸ್ಥರು ಗ್ರಾಮದ ನಾಲ್ಕೂ ದಿಕ್ಕಿಗು ಮಂತ್ರಿಸಿದ ತೆಂಗಿನಕಾಯಿಯನ್ನು ತಂದು ಕಟ್ಟಿದ್ದಾರೆ. ಕರೊನಾಗೆ ಹೆದರಿ ಹೀಗೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net