More

    ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್

    ನವದೆಹಲಿ: ಜಾಗತಿಕ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುವ ಅಧಿಕಾರ ಶೀಘ್ರವೇ ಭಾರತದ ವ್ಯಾಪಾರಿಗಳದ್ದಾಗಲಿದೆ. ದೇಶದಲ್ಲಿ ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ ಸ್ಥಾಪಿಸುವ ವಿಚಾರ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ (ಸಿಬಿ) ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ನ ಚಿಂತನೆಯನ್ನು ಸಮಾಲೋಚನಾ ಪತ್ರದ ಮೂಲಕ ಪ್ರಕಟಿಸಿದೆ. ಇದಕ್ಕೆ ಸಾರ್ವಜನಿಕರಿಂದ ಮತ್ತು ಸಂಬಂಧಪಟ್ಟ ಕ್ಷೇತ್ರದ ಪಾಲುದಾರರಿಂದ ಜೂನ್ 18ರ ಒಳಗೆ ಪ್ರತಿಕ್ರಿಯೆಯನ್ನೂ ಕೋರಿದೆ. ಸಮಾಲೋಚನಾ ಪತ್ರದಲ್ಲಿರುವ ಪ್ರಕಾರ, ಶೀಘ್ರವೇ ಷೇರುಗಳ ಮಾದರಿಯಲ್ಲಿ ಚಿನ್ನದ ವಹಿವಾಟು ಕೂಡ ಶುರುವಾಗಲಿದೆ. ಅಂದರೆ, ಚಿಲ್ಲರೆ ಹೂಡಿಕೆದಾರರು ಷೇರುಗಳನ್ನು ಖರೀದಿಸುವಂತೆ ಎಲೆಕ್ಟ್ರಾನಿಕ್ ಗೋಲ್ಡ್ ರಿಸೀಟ್ (ಇಜಿಆರ್) ಅನ್ನು ಖರೀದಿಸಬಹುದಾಗಿದೆ. ಪ್ರಸ್ತಾವಿತ ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ ಮೂಲಕ ಚಿಲ್ಲರೆ ಹೂಡಿಕೆದಾರರಷ್ಟೇ ಅಲ್ಲ, ಬ್ಯಾಂಕುಗಳು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಜುವೆಲ್ಲರ್​ಗಳು ಚಿನ್ನದ ವಹಿವಾಟು ನಡೆಸಬಹುದು.

    ನಿಯಂತ್ರಿತ ಚಿನ್ನದ ಮಾರುಕಟ್ಟೆ: ಕೇಂದ್ರ ಸರ್ಕಾರ 2018-19ರಲ್ಲಿ ಮೊದಲ ಬಾರಿಗೆ ರೆಗ್ಯುಲೇಟೆಡ್ ಗೋಲ್ಡ್ ಎಕ್ಸ್​ಚೇಂಜ್​ನ ಚಿಂತನೆಯನ್ನು ಪ್ರಕಟಿಸಿತ್ತು. ಸೆಬಿ ಇದರ ನಿಯಂತ್ರಕ ಸಂಸ್ಥೆಯಾಗಿರಲಿದೆ. ವೇರ್​ಹೌಸಿಂಗ್ ಡೆವಲಪ್​ವೆುಂಟ್ ಆಂಡ್ ರೆಗ್ಯುಲೇಟರಿ ಅಥಾರಿಟಿ (ಡಬ್ಲ್ಯುಡಿಆರ್​ಎ) ಉಗ್ರಾಣಕ್ಕೆ ಹೊರತಾಗಿ ವಾಲ್ಟಿಂಗ್, ಲೋಹ ಮೌಲ್ಯಮಾಪನ, ಲಾಜಿಸ್ಟಿಕ್ಸ್ ಅನ್ನು ನೋಡಿಕೊಳ್ಳಲಿದೆ ಎಂಬ ಅಂಶವನ್ನೂ ಪ್ರಕಟಿಸಿತ್ತು. ಈ ವರ್ಷದ ಬಜೆಟ್​ನಲ್ಲೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದರು.

    ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್ ಉದ್ದೇಶ: ಪ್ರಸ್ತಾವಿತ ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ ಮೂಲಕ ಪ್ರಾದೇಶಿಕವಾಗಿ ಪಾರದರ್ಶಕ ಮತ್ತು ಪರಿಣಾಮಕಾರಿ ದರ ನಿಗದಿ, ಚಿನ್ನದ ಗುಣಮಟ್ಟ ಖಾತರಿ, ಉತ್ತಮ ಪೂರೈಕೆ ಗುಣಮಟ್ಟದ ಉತ್ತೇಜನ, ಚಿಲ್ಲರೆ ಹೂಡಿಕೆ ದಾರರ ಸಕ್ರಿಯ ಭಾಗವಹಿಸುವಿಕೆ, ಹಣಕಾಸು ಮಾರುಕಟ್ಟೆಯೊಂದಿಗೆ ಬೃಹತ್ ಪ್ರಮಾಣದಲ್ಲಿ ಜೋಡಿಕೊಳ್ಳುವುದು, ಚಿನ್ನದ ಮರುಬಳಕೆ ದೇಶದಲ್ಲಿ ಹೆಚ್ಚಿಸುವುದು ಸಾಧ್ಯವಾಗಲಿದೆ.

    ಸಮಾಲೋಚನಾ ಪತ್ರದಲ್ಲೇನಿದೆ?: ಚೀನಾ ಹೊರತಾಗಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇರುವ ದೇಶ ಭಾರತ. ವಾರ್ಷಿಕ 800-900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಜಗತ್ತಿನ ಚಿನ್ನದ ಮಾರುಕಟ್ಟೆಯಲ್ಲಿ ಭಾರತದ ಪಾಲು ದೊಡ್ಡದು. ಅದಕ್ಕೆ ಒಂದು ಮಹತ್ವ ಕೂಡ ಇದೆ. ಚೀನಾದ ನಂತರದ ಸ್ಥಾನದಲ್ಲಿದ್ದರೂ ಭಾರತ ಮಾತ್ರವೇ ಜಾಗತಿಕ ಮಾರುಕಟ್ಟೆಯ ದರ ಸ್ವೀಕರಿಸುವ ದೇಶವಾಗಿ ಗುರುತಿಸಿಕೊಂಡಿದೆ. ಆದರೆ, ಪ್ರಸ್ತುತ ಜಾಗತಿಕವಾಗಿ ಚಿನ್ನದ ದರದ ಮೇಲೆ ಪ್ರಭಾವ ಬೀರುವ ಮಹತ್ವದ ಪಾತ್ರವನ್ನು ಭಾರತಕ್ಕೆ ನಿಭಾಯಿಸಲಾಗುತ್ತಿಲ್ಲ. ಪ್ರಸ್ತಾವಿತ ‘ಸ್ಪಾಟ್ ಗೋಲ್ಡ್ ಎಕ್ಸ್​ಚೇಂಜ್’ಗೆ ಚಾಲನೆ ನೀಡಿದರೆ ಕಾಲಾನುಕ್ರಮದಲ್ಲಿ ಭಾರತವೇ ಜಗತ್ತಿನ ಚಿನ್ನದ ದರ ನಿಗದಿಪಡಿಸಲಿದೆ.

    ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts