More

    ನನಗೆ ಆ..ಅಭ್ಯಾಸವಿದೆ..ರಾತ್ರಿ 8 ಗಂಟೆ ನಂತ್ರ ಹೀಗೆ ಮಾಡಲು ಇಷ್ಟಪಡಲ್ಲವೆಂದ ತಮನ್ನಾ

    ಹೈದ್ರಾಬಾದ್​: ಬಾಲಿವುಡ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಭಾಟಿಯಾ. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

    ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿರುವುದು ಗೊತ್ತೇ ಇದೆ. ಇವರಿಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಶೀಘ್ರದಲ್ಲೇ ಅವರು ಮದುವೆಯೊಂದಿಗೆ ಒಂದಾಗುತ್ತಾರೆ. ಸಿನಿಮಾದಲ್ಲಿ ಹಾಟ್​ ಅವತಾರ ಮೂಲಕವಾಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಈ  ಚೆಲುವೆಗೆ ವಿಚಿತ್ರವಾದ ಅಭ್ಯಾಸವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.

    ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ತಮ್ಮ ಒಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಮಿಲ್ಕಿ ಬ್ಯೂಟಿಗೂ ಒಂದು ವಿಚಿತ್ರ ಅಭ್ಯಾಸವಿದೆ. ಅದನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ. ನಟಿ ತಮನ್ನಾ ತಮ್ಮ ಅಭ್ಯಾಸಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ.

    ತಮನ್ನಾ ಇತ್ತೀಚೆಗೆ ತಮ್ಮ ಇನ್​​​ಸ್ಟಾಗ್ರಾಮ್​​ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಾನು ಯಾವುದಕ್ಕೂ ಸಿದ್ಧ ಎಂದು ಯಾವಾಗಲೂ ಎಲ್ಲರಿಗೂ ಹೇಳುವ ಕೆಟ್ಟ ಅಭ್ಯಾಸವಿದೆ. ನಿಜ ಹೇಳಬೇಕೆಂದರೆ ರಾತ್ರಿ 8 ಗಂಟೆಯ ನಂತರ ನಾನು ಎಲ್ಲಿಗೂ ಹೋಗುವುದು ಅಥವಾ ಏನನ್ನೂ ಮಾಡಲು ಇಷ್ಟಪಡುವುದಿಲ್ಲ. ರಾತ್ರಿ 8 ಗಂಟೆಯ ನಂತರ ಕೆಲಸ ಮಾಡುವುದು ಒಳ್ಳೆಯದಲ್ಲ. ಹೌದು, ಎಂಟು ಗಂಟೆಯ ನಂತರ ರಾತ್ರಿ ಎಲ್ಲಿಗೆ ಹೋಗುವುದು ಆದರೆ.. ಏನಾದರೂ ಕೆಲಸ ಮಾಡಲು. ಅಷ್ಟೊಂದು  ಇಷ್ಟವಾಗುವುದಿಲ್ಲ ಎಂದಿದ್ದಾರೆ.  ರಾತ್ರಿ ಎಂಟರ ನಂತರ ತಮನ್ನಾ ಭಾಟಿಯಾ ಮನೆಯಿಂದ ಹೊರಗೆ ಬರುವುದಿಲ್ಲ ಎನ್ನುವುದು ಸಖತ್​ ವೈರಲ್​ ಆಗಿದೆ.

    ತೆಲುಗಿನಲ್ಲಿ ಬಹುತೇಕ ಎಲ್ಲಾ ಹೀರೋಗಳ ಜೊತೆ ನಟಿಸಿದ್ದ ತಮನ್ನಾ ಈಗ ಬಾಲಿವುಡ್ ಮತ್ತು ಕಾಲಿವುಡ್​​ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತಮನ್ನಾ ಬೆಳ್ಳಿತೆರೆಯಲ್ಲಿ ಗ್ಲಾಮರಸ್ ಟ್ರೀಟ್ ನೀಡುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದರು. ತಮನ್ನಾ ತಮಿಳು, ತೆಲುಗು  ಚಿತ್ರಗಳಲ್ಲಿ ನಟಿಸಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟಿ. ತಮನ್ನಾ 100% ಲವ್, ಆಗಡು,  ರೆಬೆಲ್, ಬದರಿನಾಥ್, ಬೆಂಗಾಲ್ ಟೈಗರ್, ಬಾಹುಬಲಿ ತೆಲುಗು ಸೂಪರ್ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts