More

    ಒಂದೇ ದಿನ ಸೂಪರ್​ಮೂನ್-ಬ್ಲಡ್​ಮೂನ್; ಮೇ 26ರ ಚಂದ್ರಗ್ರಹಣದ ದಿನ ಕೌತುಕ

    ಡೆಟ್ರಾಯ್ಟ್​: ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ರಂದು ಸಂಭವಿಸಲಿದೆ. ವಿಶೇಷ ಎಂದರೆ ಇದೇ ದಿನ ಸೂಪರ್ ಮೂನ್ ಮತ್ತು ರೆಡ್ ಬ್ಲಡ್ ಮೂನ್ ಕೂಡ ಗೋಚರಿಸಲಿದೆ. ಚಂದ್ರನ ಕಕ್ಷೆಯು ಭೂಮಿಗೆ ಸರಿಯಾದ ವೃತ್ತಾಕಾರದಲ್ಲಿಲ್ಲ. ಅಂದರೆ ಭೂಮಿ ಸುತ್ತ ಚಂದ್ರ ಸುತ್ತವಾಗ ಒಂದೊಂದು ಪ್ರದೇಶದಿಂದ ಚಂದ್ರನ ಕಕ್ಷೆ ಇರುವ ಅಂತರದಲ್ಲೂ ವ್ಯತ್ಯಾಸವಾಗುತ್ತದೆ. ಇದರಂತೆ, ಮೇ 26ರಂದು ಭೂಮಿಗೆ ಸಮೀಪದಲ್ಲೇ ಅಂದರೆ ಅಂದಾಜು 28,000 ಮೈಲಿ ಸಮೀಪ ಚಂದ್ರನ ಕಕ್ಷೆ ಇರುವ ಕಾರಣ ಚಂದ್ರ ‘ಸೂಪರ್ ಮೂನ್’ ಆಗಿ ಗೋಚರಿಸುತ್ತಾನೆ. ಅಂದರೆ, ಹುಣ್ಣಿಮೆ ದಿನ ಗೋಚರಿಸುವ ಗ್ರಾತಕ್ಕಿಂತ ಚಂದ್ರ ದೊಡ್ಡ ಗಾತ್ರದಲ್ಲಿ ಕಾಣಿಸಲಿದ್ದಾನೆ. ಸೂರ್ಯ ಮತ್ತು ಚಂದ್ರರು ಭೂಮಿಯ ವಿರುದ್ಧ ಬದಿಗಳಲ್ಲಿ ಒಂದೇ ಸರಳ ರೇಖೆಯಲ್ಲಿದ್ದಾಗ ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇದರಿಂದ ಕತ್ತಲಾವರಿಸುವುದಿಲ್ಲ. ಬದಲಾಗಿ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಚಂದ್ರನನ್ನು ‘ರೆಡ್ ಬ್ಲಡ್ ಮೂನ್’ ಎನ್ನುತ್ತಾರೆ.

    ಎಲ್ಲೆಲ್ಲಿ ಗೋಚರ?: ಪೆಸಿಫಿಕ್ ಸಾಗರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿ, ಅಮೆರಿಕದ ಪಶ್ಚಿಮ ಕರಾವಳಿ, ಈಶಾನ್ಯ ಭಾರತದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಕಾಣಿಸಲಿದೆ. ಈಶಾನ್ಯ ಭಾರತದಲ್ಲಿ ಗ್ರಹಣ ಆರಂಭ ಮಧ್ಯಾಹ್ನ 3:14 ಗಂಟೆಗೆ ಮುಕ್ತಾಯ ಸಂಜೆ 6:23ಕ್ಕೆ.

    ಕರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ನಿಮ್ಮಲ್ಲಿ ಈ ಗೊಂದಲಗಳಿವೆಯೇ? ಹಾಗಿದ್ದರೆ ಇಲ್ಲಿವೆ ನೋಡಿ ಸ್ಪಷ್ಟೀಕರಣ…

    ಎಟಿಎಂಗೆ ತುಂಬಬೇಕಿದ್ದ 75 ಲಕ್ಷ ರೂ. ದೋಚಿದ ದುರುಳರು; ಹೆದರಿದ ವ್ಯಾನ್ ಚಾಲಕನನ್ನು ಕೊಂದೇ ಬಿಟ್ಟರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts