

ಬ್ರಹ್ಮಾವರ: ಸಂಸ್ಕಾರಯುತ ಶಿಕ್ಷಣದಿಂದ ಮಾನವ ಮಾಧವನಾಗಬಹುದು. ಸಂಸ್ಕಾರದಿಂದ ಮಣ್ಣು ಮಡಕೆಯಾಗುತ್ತದೆ, ಶಿಲೆ ಶಿಲ್ಪವಾಗುತ್ತದೆ, ನೀರು ತೀರ್ಥವಾಗುತ್ತದೆ ಅದೇ ರೀತಿ ಮಕ್ಕಳಿಗೆ ಸಂಸ್ಕಾರ ನೀಡಿದರೆ ಮಾನವ ಮಹದೇವನಾಗುತ್ತಾನೆ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹೇಳಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರದಲ್ಲಿ ಗುರುವಾರ ಮುಗ್ದ ಮಕ್ಕಳ ಪ್ರತಿಭೆಗಳ ಭಾವಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಉದ್ಘಾಟಿಸಿದರು. ಎಸ್‌ಡಿಎಂಸಿ ಅರುಣ್ ಭಂಡಾರಿ ಬೈಕಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಗೌರವ, ಸನ್ಮಾನ ಜರುಗಿತು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಹಂದಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಪೂಜಾರಿ, ಬಾರಕೂರು ಲಯನ್ ಅಧ್ಯಕ್ಷ ಜಯರಾಮ ನಾಯಕ್, ಕೆಪಿಎಸ್ ಹೈಸ್ಕೂಲ್ ಎಸ್‌ಡಿಎಂಸಿ ವಿಭಾಗ ಸದಸ್ಯ ರಾಮಕೃಷ್ಣ ಗಾಣಿಗ, ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ., ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಪಾಂಡುರಂಗ ಕುಲಾಲ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಧ್ಯಕ್ಷ ಮಧ್ವರಾಜ್ ಹೆಗ್ಡೆ, ವಿದ್ಯಾರ್ಥಿ ನಾಯಕಿ ನಿಹಾರಿಕಾ ಉಪಸ್ಥಿತರಿದ್ದರು.