ಕಾಬೆಟ್ಟು ಶಾಲೆಯಲ್ಲಿ ಮಕ್ಕಳ ನಾಯಕತ್ವ ಶಿಬಿರ

karkala upanyasa
ಜಿಲ್ಲಾಮಟ್ಟದ ಮಕ್ಕಳ ನಾಯಕತ್ವ ಶಿಬಿರದಲ್ಲಿ ಹಿರಿಯ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಉಪನ್ಯಾಸ ನೀಡಿದರು.
Published on

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ, ಭಾರತ ಸೇವಾದಳ ಜಿಲ್ಲಾ ಸಮಿತಿ ಉಡುಪಿ, ಭಾರತ ಸೇವಾದಳ ತಾಲೂಕು ಸಮಿತಿ ಕಾರ್ಕಳ-ಹೆಬ್ರಿ ಆಶ್ರಯದಲ್ಲಿ ಕಾಬೆಟ್ಟು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಮೂರು ದಿನಗಳ ಜಿಲ್ಲಾಮಟ್ಟದ ಮಕ್ಕಳ ನಾಯಕತ್ವ ಶಿಬಿರದಲ್ಲಿ ಮಂಗಳವಾರ ರಾಷ್ಟ್ರೀಯ ಭಾವೈಕ್ಯ- ಮಹಾತ್ಮ ಗಾಂಧೀಜಿ ಚಿಂತನೆ ವಿಷಯದಲ್ಲಿ ಪತ್ರಕರ್ತ ಬಿ.ಪುಂಡಲೀಕ ಮರಾಠೆ ಉಪನ್ಯಾಸ ನೀಡಿದರು.

ಶಿಕ್ಷಕಿ ಶಾರದಾ ಶೆಟ್ಟಿ ಕಲ್ಯಾ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳ ಜಿಲ್ಲಾ ಸಂಘಟಕಿ ಪುಷ್ಪಾವತಿ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಮಾನಂದ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಪಾಂಡುರಂಗ ಆಚಾರ್ಯ, ಕಾರ್ಯದರ್ಶಿ ಅಣ್ಣಪ್ಪ, ಮುಖ್ಯ ಶಿಕ್ಷಕ ಸುಧಾಕರ್, ವಸಂತ ನಾಯ್ಕ ಕಲ್ಯಾ, ಅಣ್ಣಿ ರೆಂಜಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net