

ಕುಂದಾಪುರ: 475 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಸ್ರೂರಿನ ಮಂಡಿಕೇರಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ 16ನೇ ವರ್ಷದ ಬ್ರಹ್ಮರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಶುಕ್ರವಾರ ಪ್ರಾರಂಭಗೊಂಡವು.
ಪ್ರಾರ್ಥನೆ ಮೂಲಕ ಧಾರ್ಮಿಕ ಅನುಷ್ಠಾನಗಳಿಗೆ ಚಾಲನೆ ನೀಡಲಾಯಿತು. ವಾರಾಹಿ ನದಿಯಲ್ಲಿ ಜಲಾನಯನ, ಮೃತ್ತಿಕಾಹರಣ, ಅಂಕುರಾರೋಪಣ, ಧ್ವಜಾರೋಹಣ, ಯಜ್ಞಾರಂಭದ ವಿಧಿಗಳು ನೆರವೇರಿದವು. ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ ಮೊದಲಾದ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಫೆ.2ರಂದು ಬ್ರಹ್ಮರಥೋತ್ಸವ ಮತ್ತು 3ರಂದು ಅವಭೃತ ಉತ್ಸವ ನಡೆಯಲಿದೆ.