ಋಣಮುಕ್ತತೆಯಲ್ಲಿ ಬದುಕಿನ ಸಾರ್ಥಕ್ಯ

bindu
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಪ್ರತಿಯೊಬ್ಬ ಮನಷ್ಯನಿಗೂ ನಮ್ಮ ಸಂಸ್ಕೃತಿ ಹೊರೆಸಿರುವ ದೈವಋಣ, ಪಿತೃಋಣ, ಆಚಾರ್ಯಋಣ, ಸಮಾಜದಋಣ ಎಂಬ ನಾಲ್ಕು ಋಣ ತೀರಿಸುವ ಹೊಣೆ ಇದೆ. ಇವು ಕೇಳಲು ಸರಳ ಎನಿಸಿದರೂ ತೀರಿಸಲು ಒಂದು ಜನ್ಮ ಸಾಲದು. ಋಣಮುಕ್ತರಾಗುವಲ್ಲಿಯೇ ಬದುಕಿನ ಸಾರ್ಥಕ್ಯವಿದೆ ಎಂದು ಸಾಹಿತಿ ಡಾ.ನಾ.ಸೋಮೇಶ್ವರ ಹೇಳಿದರು.

ಶಾರದಾ ವೇದಿಕೆಯಲ್ಲಿ ಸುರಭಿ ಸಂಸ್ಥೆ ಸುರಭಿ ಜೈಸಿರಿ ಹಾಗೂ ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಸುರಭಿ 11ನೇ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಯಾನಂದ ಹೋಬಳಿದಾರ್ ಅವರನ್ನು ಸನ್ಮಾನಿಸಲಾಯಿತು. ಸುರಭಿ ಭರತನಾಟ್ಯ ಗುರು ಚಂದ್ರಶೇಖರ ನಾವಡ ಅವರಿಗೆ ಗುರುವಂದನೆ, ಸುರಭಿ ನಿರ್ದೇಶಕ ಗಣಪತಿ ಹೋಬಳಿದಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ, ನಿವೃತ್ತ ಬ್ಯಾಂಕ್ ಅಧಿಕಾರಿ ಎಚ್.ವಸಂತ ಹೆಗ್ಡೆ, ಉದ್ಯಮಿ ಚಂದ್ರಶೇಖರ್ ಕಲ್ಪತರು, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಸುರಭಿ ಪ್ರಾಕ್ತನ ವಿದ್ಯಾರ್ಥಿನಿ ಬಿಂದುಶ್ರೀ ಸನತ್ ಸುರತ್ಕಲ್, ಸುರಭಿ ನಿರ್ದೇಶಕ ಸುಧಾಕರ ಪಿ., ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪಸ್ಥಿತರಿದ್ದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಪ್ರಸ್ತಾವಿಸಿದರು. ನಿಕಟಪೂರ್ವಾಧ್ಯಕ್ಷ ನಾಗರಾಜ ಪಿ.ಯಡ್ತರೆ ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ ಕೊರಗ ವಂದಿಸಿದರು. ಸದಸ್ಯರಾದ ಮಂಜುನಾಥ ದೇವಾಡಿಗ ಹಾಗೂ ಗಣೇಶ್ ಪೂಜಾರಿ ನಿರೂಪಿಸಿದರು.

ಪ್ರಶಸ್ತಿಗಳು ಎಷ್ಟು ಬಂತು ಎಂದು ಲೆಕ್ಕಹಾಕುವ ಬದಲಿಗೆ ಅದನ್ನು ಯಾರಿಗೆ ಕೊಡುವುದರಿಂದ ಮೌಲ್ಯ ಹೆಚ್ಚಾಯಿತೆಂದು ಸಂಘಟನೆ ಭಾವಿಸುವಂತಾದರೆ, ಪ್ರಶಸ್ತಿ ಸ್ವೀಕರಿಸುವ ಜತೆಗೆ ತಮ್ಮವರೆಲ್ಲರನ್ನೂ ನೆನೆಯುತ್ತಾ ಸ್ವೀಕರಿಸುವವರು ಅದರ ಸಾರ್ಥಕತೆ ಅನುಭವಿಸಿದರೆ ಪ್ರಶಸ್ತಿ ಘನತೆ ಹೆಚ್ಚುತ್ತದೆ. ಬಿಂದುಶ್ರೀ ಪ್ರಶಸ್ತಿ ನಾ.ಸೋಮೇಶ್ವರ ಅವರಿಗೆ ನೀಡುವ ಅಂತಹ ಸುಂದರ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂಬುದೇ ಸಂತಸ. - ಗುರುರಾಜ್ ಗಂಟಿಹೊಳೆ https://www.vijayavani.net/religious-activities-begin-in-mandikeri https://www.vijayavani.net/green-voice-offering-to-nagabobbarya-kshethra

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net