ಮಕ್ಕಳಲ್ಲಿ ಧರ್ಮದ ಬಗ್ಗೆ ಅರಿವು ಅಗತ್ಯ

SANMANA
ಶ್ರೀ ದುರ್ಗಾಪರಮೇಶ್ವರೀ ಬ್ರಹ್ಮಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಮಾರಾಳಿಮನೆ ಅವರನ್ನು ಸನ್ಮಾನಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ದೇವಸ್ಥಾನಗಳು ಉಳಿದು ಅಭಿವೃದ್ಧಿಯಾಗಲು ಕುಟುಂಬ ಸದಸ್ಯರು, ಊರಿನವರ ಸಹಕಾರ ಬೇಕು. ಮುಂದಿನ ಪೀಳಿಗೆಗೆ ದೈವ, ದೇವರುಗಳ ಬಗ್ಗೆ ಅರಿವಿರಬೇಕು. ನಮ್ಮ ಧರ್ಮದ ಬಗ್ಗೆ ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ನಾವು ಸಂಪಾದನೆ ಮಾಡಿದ್ದರಲ್ಲಿ ಒಂದಂಶವನ್ನಾದರೂ ಸಮಾಜಕ್ಕೆ ನೀಡಬೇಕು ಎಂದು ಮಾರಾಳಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಿಶೋರ್ ಕುಮಾರ್ ಹೆಗ್ಡೆ ಕೈಲ್ಕೆರೆ ಹೇಳಿದರು.

ನಾಲ್ಕೂರು ಗ್ರಾಮದ ಮಾರಾಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಮಾರಾಳಿಮನೆ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ಬಾಲಕೃಷ್ಣ ಕರಬ, ಪ್ರಮುಖರಾದ ಕಾಶೀನಾಥ್ ಶೆಣೈ ಕಜ್ಕೆ, ಪ್ರತಾಪ್ ಹೆಗ್ಡೆ ಮಾರಾಳಿ, ಪ್ರಭಾಕರ ಶೆಟ್ಟಿ ಮಾರಾಳಿ ಒಳಬೈಲು, ಎಂ.ಜಯರಾಮ ಶೆಟ್ಟಿ ಮಾರಾಳಿಮನೆ, ಹಿರಿಯರಾದ ಸುಧಾಕರ ಶೆಟ್ಟಿ, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಕೃಷ್ಣ ಪೂಜಾರಿ, ಗರಡಿ ಅರ್ಚಕ ಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ಮತ್ತು ಹಿರಿಯ ಪತ್ರಕರ್ತ ಅನಂತ ಚಿನಿವಾರ ಧಾರ್ಮಿಕ ಪ್ರವಚನ ನೀಡಿದರು. ಪೂಜೆ ಹಾಗೂ ಸಂದರ್ಶನ, ಸಂಜೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ನೃತ್ಯ ವೈಭವ ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಮಾರಾಳಿಮನೆ ಅವರನ್ನು ಸನ್ಮಾನಿಸಲಾಯಿತು. ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಾಪ್ ಹೆಗ್ಡೆ ಮಾರಾಳಿ ಸ್ವಾಗತಿಸಿದರು. ಮಂಜುನಾಥ್ ಹಿಲಿಯಾಣ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net