ಹರಿಖಂಡಿಗೆಯಲ್ಲಿ ತಪ್ತ ಮುದ್ರಾಧಾರಣೆ

harikhandige
ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಪ್ರಯುಕ್ತ ಶನಿವಾರ ತಪ್ತ ಮುದ್ರಾಧಾರಣೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಹರಿಖಂಡಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಪ್ರಯುಕ್ತ ಶನಿವಾರ ಶ್ರೀ ಸಂಸ್ಥಾನ ದೇವರಿಗೆ ಉಷಾಪೂಜೆ, ಅತಿರಿಕ್ತೋಪವಾಸ, ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಯಿತು.

ಮಧ್ಯಾಹ್ನ ಶ್ರೀ ಸಂಸ್ಥಾನ ದೇವರಿಗೆ ಪವಮಾನ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ, ಸುಧೀಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸದಸ್ಯರು, ಅರ್ಚಕರು, ಶ್ರೀ ಲಕ್ಷ್ಮೀವೆಂಕಟರಮಣ ಮಹಿಳಾ ಮಂಡಳಿ, ಭಜನಾ ಮಂಡಳಿ, ಯುವಕ ಮಂಡಲ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮ

ಜೂ.8ರಂದು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನಮ ನಕ್ಷತ್ರ ಪ್ರಯುಕ್ತ ದೇವರಿಗೆ ಲಘು ವಿಷ್ಣು ಹವನ, ಮೂಲ ಮಂತ್ರ ಹವನ, ಶ್ರೀಗಳಿಂದ ಪೂರ್ಣಾಹುತಿ, ಶ್ರೀ ಸಂಸ್ಥಾನ ದೇವರಿಗೆ ವಿಶೇಷ ಶತಪವಮಾನ ಕಲಶಾಭಿಷೇಕ, ಮಹಾಪೂಜೆ, ಭಿಕ್ಷಾ ಸೇವೆ, ಸಮಾರಾಧನೆ, ಸಂಜೆ ಶ್ರೀ ಸುಧೀಂದ್ರ ತೀರ್ಥ ಶ್ರೀಗಳ ಭಾವಚಿತ್ರದೊಂದಿಗೆ ದೊಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. ರಾತ್ರಿ ಶ್ರೀ ಸಂಯಮೀಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಸಭಾ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net