

ಚಿಕ್ಕಮಗಳೂರು: ಕರೊನಾ ಸೋಂಕಿನ ನಿಯಂತ್ರಣ ಮಾಡುವುದಕ್ಕೆ ಲಾಕ್ಡೌನ್ ಮಾಡುವ ನಿರ್ಧಾರವನ್ನು ಪ್ರಧಾನಿ ಮೋದಿ ಅಯಾ ಜಿಲ್ಲೆಗೆಳಿಗೆ ವಹಿಸಿಕೊಟ್ಟ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮೇ 20ರಿಂದ 24ರವರೆಗೆ ಜಿಲ್ಲೆಯನ್ನು ಲಾಕ್ಡೌನ್ ಮಾಡುವುದಾಗಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮೇ 20ರ ಬೆಳಗ್ಗೆ 10 ಗಂಟೆಯಿಂದ ಮೇ 24ರ ಸಂಜೆ 6 ಗಂಟೆಯವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಮೆಡಿಕಲ್, ಆಸ್ಪತ್ರೆ ಮತ್ತು ಹಾಲಿನ ಅಂಗಡಿಗಳಿಗೆ ಮಾತ್ರವೇ ತೆರಯಲು ಅನುಮತಿ ನೀಡಲಾಗಿದೆ. ಎಲ್ಲ ರೀತಿಯ ವಾಹನ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈಗಾಗಲೇ ನಿಶ್ಚಯವಾಗಿರುವ ಮದುವೆಗೆ ಅನುಮತಿ ಪಡೆದು, 10 ಮಂದಿಯನ್ನು ಸೇರಿಸಬಹುದು. ಕೇವಲ 5 ಮಂದಿಯ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಬಹುದು. ಸರ್ಕಾರಿ ಕಚೇರಿಗಳಲ್ಲಿ ಅಲ್ಲಿನ ಸಿಬ್ಬಂದಿ ಬಿಟ್ಟು ಬೇರಾರಿಗೂ ಪ್ರವೇಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ ಎಲ್ ಕುಮಾರ್ ಅದೇಶದಲ್ಲಿ ತಿಳಿಸಿದ್ದಾರೆ.