ಮಗಳ ಆತ್ಮಹತ್ಯೆ ಸೇಡಿಗೆ ಯುವಕನ ಬರ್ಬರ ಕೊಲೆ: ವರ್ಷದಿಂದ ನಡೆದಿತ್ತು ಭಾರಿ ಸಂಚು

Daughter
Published on

ಚಿಕ್ಕಬಳ್ಳಾಪುರ: ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗೇಪಲ್ಲಿ ತಾಲ್ಲೂಕು ಯಗವ ಮದ್ದಲಖಾನೆ ಬಳಿ ನಡೆದಿದೆ.

ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಗಣೇಶ್ ಎಂಬುವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವೆಂಕಟೇಶ್ ಮಗಳು ಸಿರೀಶಾ ಹಾಗೂ ಹರೀಶ್​ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ವಿವಾಹಕ್ಕೆ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಇದೇ ಕಾರಣದಿಂದ ಮನನೊಂದು ಸಿರೀಶಾ ವರ್ಷದ ಹಿಂದೆ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.

ಮಗಳ ಸಾವಿಗೆ ಹರೀಶ್ ಕಾರಣವೆಂದು ಹೊಂಚು ಹಾಕಿ ಸಿರೀಶಾ ತಂದೆ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಸದ್ಯ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

ವೆಂಕಟೇಶ್​ ಮನೆ ಮುಂದೆ ಗಲಾಟೆ

ಕೊಲೆ ಮಾಡಿದ ವೆಂಕಟೇಶ್ ಮನೆ ಮುಂದೆ ಹರೀಶ್​ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಮನೆ ಬಾಗಿಲು ಹಾಗೂ ಕಿಟಕಿ ಗಾಜು ಹೊಡೆದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net