ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಬಂದ್​!

chickpete
Published on

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ಚಿಕ್ಕಪೇಟೆ ನಿಲ್ದಾಣದಲ್ಲಿ ಎಸ್ಕಲೇಟರ್​ ಅಳವಡಿಸುವ ಕಾಮಗಾರಿ ನಡೆಸಲು ನಿಲ್ದಾಣದ ಮುಖ್ಯದ್ವಾರವನ್ನು ಮುಚ್ಚಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಯಾವುದೇ ಮಾಹಿತಿ ನೀಡದೆ ಏಕಾಏಕಿ ಮುಖ್ಯದ್ವಾರ ಮುಚ್ಚಿ, ಬೇರೆಡೆ ಬದಲಿ ಪ್ರವೇಶ ದ್ವಾರವನ್ನು ತೆರೆಯಲಾಗಿದೆ. ಈ ಬಗ್ಗೆ ನಿಲ್ದಾಣದಲ್ಲಿ ಯಾವುದೇ ಸೂಚನಾ ಲಕಗಳನ್ನು ಅಳವಡಿಸದೆ ಇರುವುದರಿಂದ ನಿಲ್ದಾಣವನ್ನು ಹೇಗೆ ಪ್ರವೇಶಿಸಬೇಕು, ಎಲ್ಲಿಂದ ಹೊರಬರಬೇಕು ಎಂಬ ಬಗ್ಗೆ ಗೊಂದಲ ಉಂಟಾಗುತ್ತಿದೆ.

ಚಿಕ್ಕಪೇಟೆ ಮುಖ್ಯರಸ್ತೆಯ ಪಕ್ಕದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಪ್ರವೇಶದ್ವಾರದ ಹೊರಭಾಗದ ರಸ್ತೆ ದುಸ್ಥಿತಿಯಿಂದ ಕೂಡಿದೆ. ಹೀಗಾಗಿ ಶ್ರೀ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net